ಬೆಳ್ಳಿರಥದಲ್ಲಿ ಶ್ರೀ ವಿಶ್ವಕರ್ಮರ ಭಾವಚಿತ್ರ ಮೆರವಣೆಗೆ

ವಿಶ್ವಕರ್ಮ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ತೊರೆನೂರು ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಸ್ವಾಮಿಯ ಭಾವಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಯಿತು. ಟಿ.ಎಸ್. ಪ್ರಕಾಶಾಚಾರಿ, ಟಿ.ಎಸ್. ಮೂರ್ತಾಚಾರಿ, ಟಿ.ಎನ್. ದೇವರಾಜ್, ಟಿ.ಎನ್. ಜಗದೀಶ್ ಮತ್ತಿತರರು ಇದ್ದರು.
ವಿಶ್ವಕರ್ಮ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ತೊರೆನೂರು ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಸ್ವಾಮಿಯ ಭಾವಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಯಿತು. ಟಿ.ಎಸ್. ಪ್ರಕಾಶಾಚಾರಿ, ಟಿ.ಎಸ್. ಮೂರ್ತಾಚಾರಿ, ಟಿ.ಎನ್. ದೇವರಾಜ್, ಟಿ.ಎನ್. ಜಗದೀಶ್ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತೊರೆನೂರು ಗ್ರಾಮದಲ್ಲಿ ಜಯಂತ್ಯುತ್ಸವ
ಕುಶಾಲನಗರ: ಸಮೀಪದ ತೊರೆನೂರು ಗ್ರಾಮದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ ವಿಶ್ವಕರ್ಮ ಜಯಂತ್ಯುತ್ಸವ ಆಚರಿಸಲಾಯಿತು.
ಅಲಂಕೃತಗೊಂಡ ಬೆಳ್ಳಿರಥದಲ್ಲಿ ಶ್ರೀ ವಿಶ್ವಕರ್ಮ ಸ್ವಾಮಿಯ ಭಾವಚಿತ್ರವನ್ನಿಟ್ಟು ಸಕಲ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಇದಕ್ಕೂ ಮುನ್ನ ಗ್ರಾಮದ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಯಿತು.
ವಿಶ್ವಕರ್ಮ ಸಮಾಜದ ಗ್ರಾಮ ಘಟಕದ ಅಧ್ಯಕ್ಷ ಟಿ.ಎಸ್. ಪ್ರಕಾಶಾಚಾರಿ ಮಾತನಾಡಿ, ವಿಶ್ವಕರ್ಮ ಜಯಂತಿ ಸೃಷ್ಟಿಕರ್ತ ಶ್ರೀ ವಿಶ್ವಕರ್ಮರ ಜನ್ಮದಿನವನ್ನು ಸ್ಮರಿಸುವ ಪವಿತ್ರ ಪದ್ಧತಿಯಾಗಿದೆ. ಕಲೆ, ವಾಸ್ತುಶಿಲ್ಪ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯವು ನೀಡಿದ ಅಪಾರ ಕೊಡುಗೆ ಸಮಾಜದ ಅಭಿವೃದ್ಧಿಗೆ ಬಲ ತಂದಿದೆ ಎಂದರು.
ಸಮಾಜದ ಉಪಾಧ್ಯಕ್ಷ ಟಿ.ಎಸ್. ಮೂರ್ತಾಚಾರಿ, ಕಾರ್ಯದರ್ಶಿ ಟಿ.ಎನ್. ದೇವರಾಜ್, ಕೋಶಾಧಿಕಾರಿ ಟಿ.ಎನ್. ಜಗದೀಶ್, ಪದಾಧಿಕಾರಿಗಳಾದ ಟಿ.ಎಸ್.ಗಣೇಶಾಚಾರಿ, ಟಿ.ಆರ್. ಪ್ರಸನ್ನ, ಟಿ.ವಿ. ಡಂಕಣಾಚಾರಿ, ಟಿ.ಆರ್. ಮಂಜುನಾಥ್, ಸಮಾಜದ ಬಂಧುಗಳು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net