ಮುಳ್ಳು ಹಂದಿಗಳಿಂದ ಅಡಕೆ ಬೆಳೆಗಳ ನಾಶ

ಮುಳ್ಳುಹಂದಿಗಳಿಂದ ನಾಶವಾಗಿರುವ ಅಡಕೆ ಗಿಡ
ಮುಳ್ಳುಹಂದಿಗಳಿಂದ ನಾಶವಾಗಿರುವ ಅಡಕೆ ಗಿಡ
Published on

ಪ್ರಮುಖ ಮುಖ್ಯಾಂಶಗಳು

  • ಮಾನವ-ವನ್ಯಜೀವಿ ಸಂಘರ್ಷದಿಂದ ಸಂಕಷ್ಟ
ಮಡಿಕೇರಿ: ಮಾನವ-ವನ್ಯಜೀವಿ ಸಂಘರ್ಷದಿಂದ ಸಂಕಷ್ಟದಲ್ಲಿ ಇರುವ ಕೊಡಗಿನ ರೈತರು ಈಗ ಮುಳ್ಳು ಹಂದಿಗಳ ಹಾವಳಿ ಎದುರಿಸಬೇಕಾಗಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೀನುಕೊಲ್ಲಿ ಮೀಸಲು ಅರಣ್ಯ ಕಡೆಯಿಂದ ಬಂದಿರುವ ಕಾಡು ಹಂದಿ ಮತ್ತು ಮುಳ್ಳು ಹಂದಿಗಳು ಈ ಭಾಗದಲ್ಲಿ ಅಡಕೆ ಗಿಡಗಳನ್ನು ತಿಂದು, ತುಂಡು ಮಾಡಿ ಹಾನಿ ಮಾಡಿವೆ.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಕಾಡಾನೆಗಳ ಹಾವಳಿ ಇದ್ದು, ಇದರ ಜತೆಗೆ ಕಾಡುಹಂದಿ ಮತ್ತು ಮುಳ್ಳು ಹಂದಿಗಳು ರೈತರ ಜಮೀನಿಗೆ ದಾಳಿ ಮಾಡಿ ಒಂದರಿಂದ ಎರಡು ವರ್ಷಗಳ ಅವಧಿಯ ಅಡಕೆ ಬೆಳೆಗಳನ್ನು ನಾಶ ಮಾಡಿವೆ.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್. ವಿಶ್ವ, ಗ್ರಾಮಸ್ಥರಾದ ತಿಲಕ್, ಯತೀಶ್, ಸೂರ್ಯಕುಮಾರ್, ಬಾಲಕೃಷ್ಣ, ಪವನ್ ಸೇರಿದಂತೆ ಅನೇಕ ರೈತರ ಜಮೀನಿಗೆ ದಾಳಿ ಮಾಡಿರುವ ಮುಳ್ಳು ಹಂದಿ ಮತ್ತು ಕಾಡು ಹಂದಿಗಳು ಬೆಳೆ ಹಾನಿಗೆ ಕಾರಣವಾಗಿವೆ.
ಅರಣ್ಯ ಇಲಾಖೆ ಅಧಿಕಾರಿ ವರ್ಗದವರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್. ವಿಶ್ವ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net