ಬೈಪಾಸ್ ರಸ್ತೆಯ ದಡದಲ್ಲಿರುವ ಮಿಲಿಟರಿ ಹೋಟೆಲ್ಗಳಿಂದ ಕೀರೆಹೊಳೆಗೆ ತ್ಯಾಜ್ಯ ನೀರನ್ನು ನೇರವಾಗಿ ಬಿಡಲಾಗುತ್ತಿದೆ. ಕೀರೆಹೊಳೆಯು, ಮಾಯಮುಡಿ, ಕಿರುಗೂರು, ನಲ್ಲೂರು, ಬೆಸಗೂರು, ಬೆಕ್ಕೆಸೊಡ್ಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹರಿಯುವ ಹೊಳೆಯ ನೀರು ಲಕ್ಷ್ಮಣ ತೀರ್ಥ ನದಿಗೆ ಸೇರುತ್ತದೆ. ಈ ಭಾಗದ ಕೃಷಿಕರು ಕೀರೆ ಹೊಳೆಯ ನೀರನ್ನೇ ಅವಲಂಬಿಸಿ ಕೃಷಿ ಚಟುವಟಿಕೆಗಳಿಗೆ, ದನ ಕರುಗಳಿಗೆ ಹಾಗೂ ಬಟ್ಟೆಗಳನ್ನು ಒಗೆಯಲು ಉಪಯೋಗಿಸುತ್ತಾರೆ. ತ್ಯಾಜ್ಯ ಸೇರುತ್ತಿರುವುದರಿಂದ ನೀರು ಮಲಿನವಾಗಿದೆ ಎಂದು