ಕೊಡವ ಮುಸ್ಲಿಂ ಅಸೋಸಿಯೇಷನ್‌ನಿಂದ ಶಾಸಕ ಡಾ.ಮಂತರ್‌ಗೌಡಗೆ ಸನ್ಮಾನ

ಕೆಎಂಎ ವತಿಯಿಂದ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು, ದುದ್ದಿಯಂಡ ಸೂಫಿ ಹಾಜಿ, ಈತಲತಂಡ ರಫೀಕ್ ತೂಚಮಕೇರಿ, ಹರಿಶ್ಚಂದ್ರ ಎ.ಹಂಸ, ಆಲೀರ ಎಂ.ರಶೀದ್, ಕೋಳುಮಂಡ ರಫೀಕ್, ಕೆಂಗೋಟಂಡ ಎಸ್.ಸೂಫಿ ಮತ್ತು ಪರವಂಡ ಎ.ಸಿರಾಜ್ ಇದ್ದರು.
ಕೆಎಂಎ ವತಿಯಿಂದ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು, ದುದ್ದಿಯಂಡ ಸೂಫಿ ಹಾಜಿ, ಈತಲತಂಡ ರಫೀಕ್ ತೂಚಮಕೇರಿ, ಹರಿಶ್ಚಂದ್ರ ಎ.ಹಂಸ, ಆಲೀರ ಎಂ.ರಶೀದ್, ಕೋಳುಮಂಡ ರಫೀಕ್, ಕೆಂಗೋಟಂಡ ಎಸ್.ಸೂಫಿ ಮತ್ತು ಪರವಂಡ ಎ.ಸಿರಾಜ್ ಇದ್ದರು.
Published on
ಪೊನ್ನಂಪೇಟೆ: ಕೊಡಗಿನ ಜಮ್ಮಾ ಹಿಡುವಳಿದಾರರನ್ನು ದಶಕಗಳದಿಂದ ಕಾಡುತ್ತಿದ್ದ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕವನ್ನು ಕಳೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಸನ್ಮಾನಿಸಲಾಯಿತು.
ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಅವರ ನೇತೃತ್ವದ ನಿಯೋಗ ಮಂಗಳವಾರ ಶಾಸಕರ ಸೋಮವಾರಪೇಟೆಯ ನಿವಾಸದಲ್ಲಿ ಭೇಟಿ ಮಾಡಿ ಅವರನ್ನು ಸನ್ಮಾನಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಕೊಡಗಿನ ಜಮ್ಮಾ ಬಾಣೆ ಭೂಮಿ ವಿವಾದಗಳ ಪರಿಹಾರಕ್ಕಾಗಿ ಕರ್ನಾಟಕ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ-2025 ಅನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ತೋರಿದ ಇಚ್ಛಾಶಕ್ತಿ ಕೊಡಗಿನ ಜನರ ಪರವಾಗಿತ್ತು. ಕೊಡಗಿನ ಬಹುಕಾಲದ ಈ ಸಮಸ್ಯೆಯನ್ನು ಕಾನೂನುಬದ್ಧವಾಗಿ ಪರಿಹರಿಸಬೇಕೆಂಬ ಮನಸ್ಸು ಸಚಿವರಿಗೆ ಹಿಂದಿನಿಂದಲೂ ಇತ್ತು. ಈ ಕಾರಣಕ್ಕಾಗಿ ಅವರು ಜಮ್ಮಾ ಭೂಮಿ ಸಮಸ್ಯೆಯ ಬಗ್ಗೆ ದೀರ್ಘವಾಗಿ ಅಧ್ಯಯನ ನಡೆಸಿದ್ದರು. ಈ ಕಾನೂನನ್ನು ಕೊಡಗಿನ ಜನತೆ ಸಮರ್ಪಕವಾಗಿ ಮತ್ತು ನ್ಯಾಯೋಚಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೊಡವ ಮುಸ್ಲಿಂ ಅಸೋಸಿಯೇಷನ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ನಿರ್ದೇಶಕರಾದ ಆಲೀರ ಎಂ.ರಶೀದ್, ಕೋಳುಮಂಡ ರಫೀಕ್, ಕೆಂಗೋಟಂಡ ಎಸ್.ಸೂಫಿ ಮತ್ತು ಪರವಂಡ ಎ. ಸಿರಾಜ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net