ಪೌರಕಾರ್ಮಿಕರೇ ನಿಜವಾದ ಶ್ರಮಜೀವಿಗಳು

ಪೊನ್ನಂಪೇಟೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿದ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲೀರ ರಶೀದ್, ಮುಖ್ಯಾಧಿಕಾರಿ ಗೋಪಿ, ರಶಿಕ ಅಶ್ವತ್, ಭಾರತಿ, ಜುನೈದ್, ಸುಮಿತಾ, ನೇತ್ರಾವತಿ,ಅಜೀಜ್, ವಿಜಯಕುಮಾರ್, ರಾಮಕೃಷ್ಣ ಇತರರಿದ್ದರು.
ಪೊನ್ನಂಪೇಟೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿದ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲೀರ ರಶೀದ್, ಮುಖ್ಯಾಧಿಕಾರಿ ಗೋಪಿ, ರಶಿಕ ಅಶ್ವತ್, ಭಾರತಿ, ಜುನೈದ್, ಸುಮಿತಾ, ನೇತ್ರಾವತಿ,ಅಜೀಜ್, ವಿಜಯಕುಮಾರ್, ರಾಮಕೃಷ್ಣ ಇತರರಿದ್ದರು.
Published on
ಪೊನ್ನಂಪೇಟೆ: ಇಲ್ಲಿನ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಇಡೀ ಪಟ್ಟಣ ಸುಂದರವಾಗಿ ಕಾಣಬೇಕಾದರೆ ಆಯಾ ವ್ಯಾಪ್ತಿಯ ಪೌರಕಾರ್ಮಿಕರ ಕ್ರಮವನ್ನು ಅವಲಂಬಿಸಿದೆ. ಬೆಳಗಿನ ಜಾವ ಇವರು ಮಾಡುವ ಸ್ವಚ್ಛತಾ ಕಾಯಕವೇ ಆರೋಗ್ಯ ಪೂರ್ಣ ಪಟ್ಟಣ ನಿರ್ಮಾಣಕ್ಕೆ ಪ್ರಮುಖ ಕಾರಣವಾಗಿದೆ. ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಆರೋಗ್ಯ ಕಾಪಾಡುವ ಪೌರಕಾರ್ಮಿಕರೇ ನಿಜವಾದ ಶ್ರಮಜೀವಿಗಳು. ಪೌರಕಾರ್ಮಿಕರ ವೃತ್ತಿ ಬದ್ಧತೆ ಶ್ರೇಷ್ಠವಾದದ್ದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಗೋಪಿ ಮಾತನಾಡಿ, ಪೊನ್ನಂಪೇಟೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಇಲ್ಲಿನ ಸ್ವಚ್ಛತಾಗಾರರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸುತ್ತಿದ್ದ ಸ್ವಚ್ಛತಾಗಾರರನ್ನು ನೇರಪಾವತಿಯಡಿ ಸೇರಿಸಲು ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾಸಿಕ ವೇತನ ಹೊರತುಪಡಿಸಿ ಪ್ರತಿ ತಿಂಗಳಿಗೆ ತಲಾ ರೂ.2000ದಂತೆ ಸಂಕಷ್ಟ ಭತ್ಯೆ, ಬೆಳಗಿನ ಉಪಾಹಾರ, ಆರೋಗ್ಯ ವಿಮೆ ಇತ್ಯಾದಿ ಸೇವೆಗಳನ್ನು ಒದಗಿಸುವುದಾಗಿ ತಿಳಿಸಿದರು.
ಪಟ್ಟಣ ಪಂಚಾಯಿತಿಯ ಎಲ್ಲ 12 ಜನ ಸ್ಛಚ್ಛತಾಗಾರರಿಗೆ ಅವರ ಸುದೀರ್ಘ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಸಮವಸ್ತ್ರ ಮತ್ತು ಪೌರಕಾರ್ಮಿಕರ ಎಲ್ಲ ಕುಟುಂಬಗಳಿಗೆ ಕುಕ್ಕರ್‌ಗಳನ್ನು ವಿತರಿಸಲಾಯಿತು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆಲೀರ ರಶೀದ್,ಸದಸ್ಯರಾದ ಪಿ. ಕೆ.ವಿಜಯಕುಮಾರ್, ಆಲೀರ ಅಬ್ದುಲ್ ಅಜೀಜ್, ಕೆ.ವಿ.ರಾಮಕೃಷ್ಣ , ಮೂಕಳೇರ ಜಿ.ಸುಮಿತಾ, ಕೋಳೇರ ಯಮುನಾ ಭಾರತಿ, ರಶಿಕ ಅಶ್ವಥ್, ನೇತ್ರಾವತಿ ಪಿ.ಡಿ. ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net