ಬಾಳೆಲೆ ವಿಜಯಲಕ್ಷ್ಮಿ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಶಾಲೆಯ ಧನಸಹಾಯ ಮಾಡಿದ ಸಂದರ್ಭ ಶಿಕ್ಷಕ ಚಂದ್ರಶೇಖರ್, ಶಿವದಾಸನ್ ,ಸುಂದರ ,ಶಿವಪ್ಪ ,ಮುಕುಂದ, ಅಶ್ವಿನಿ, ಅರವಿಂದ, ಪವನ್ ,ಮಂಜುನಾಥ್, ಭೀಮಣಿ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್ ನಾವು ಈಗ ನೀಡಿದ ಅರ್ಥಿಕ ನೆರವಿನ ರೀತಿಯಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಾಂಗ ಮಾಡಿ ಭವಿಷ್ಯದಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕರಿಸುವಂತೆ ಕರೆ ನೀಡಿದರು.
ವಿದ್ಯಾಸಂಸ್ಥೆಯ ಪರವಾಗಿ ಹಿರಿಯ ಸಹಾಯಕ ಅಧ್ಯಾಪಕರಾದ ಚಂದ್ರಶೇಖರ್ ನಗದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ವೀಕರಿಸಿದರು.
ಈ ಸಂದರ್ಭ ಹಳೆಯ ವಿದ್ಯಾರ್ಥಿಗಳಾದ ಶಿವದಾಸನ್, ವನಿತಾ, ಸುಂದರ, ಶಿವಪ್ಪ ,ಮುಕುಂದ, ಅಶ್ವಿನಿ ,ವಸಂತಿ ,ಅರವಿಂದ ,ಪವನ್ ,ಮಂಜುನಾಥ್, ಭೀಮಣಿ , ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು .