ವಿರಾಜಪೇಟೆ-ಮಡಿಕೇರಿ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಕಾಕೋಟುಪರಂಬು ನಾಲ್ಕೇರಿ ಬಳಿ ಬಾಳೆಗಿಡ ನೆಟ್ಟಿರುವುದು.
Published on:
Copied
Follow Us
ವಿರಾಜಪೇಟೆ:
ವಿರಾಜಪೇಟೆ ಸಮೀಪದ ಕಾಕೋಟುಪರಂಬು ನಾಲ್ಕೇರಿಯಲ್ಲಿ ಶುಕ್ರವಾರ ಮೂರು ವರ್ಷಗಳಿಂದ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ಶನಿವಾರ ಹೆದ್ದಾರಿಯಲ್ಲೇ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ವಿರಾಜಪೇಟೆ-ಮಡಿಕೇರಿ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಕಾಕೋಟುಪರಂಬು ನಾಲ್ಕೇರಿ ಬಳಿ ಸುಮಾರು ಮೂರು ವರ್ಷಗಳಿಂದ ರಸ್ತೆ ಸಂಚಾರಕ್ಕೆ ಬಹಳ ಸಮಸ್ಯೆಯಾಗುತ್ತಿದೆ. ಇದುವರೆಗೂ ರಸ್ತೆಯಲ್ಲಾದ ಹಳ್ಳವನ್ನು ಮುಚ್ಚುವ ಕಾರ್ಯವಾಗಲಿ ಹೆದ್ದಾರಿ ಅಭಿವೃದ್ಧಿಪಡಿಸುವ ಕೆಲಸ ನಡೆಯದೆ ಇದ್ದುದ್ದರಿಂದ ಬೆಸತ್ತ ಕೆಲವರು ಬೆಳಗ್ಗೆ ಹೆದ್ದಾರಿಯಲ್ಲಿ ಎರಡು ದೊಡ್ಡ ಹಳ್ಳಗಳಲ್ಲಿ ಬಾಳೆಗಿಡವನ್ನು ನೆಟ್ಟು ಮಣ್ಣು ಮುಚ್ಚಿ ಬಾಳೆಗಿಡದ ಸುತ್ತ ನಾಲ್ಕು ದಿಕ್ಕಿನಲ್ಲಿ ವಾಹನಗಳಿಂದ ಬಾಳೆ ಗಿಡಗಳಿಗೆ ಹಾನಿಯಾಗ ಬಾರದೆಂದು ರಸ್ತೆಯ ಮೇಲೆ ಕಲ್ಲುಗಳನ್ನು ಇರಿಸಿದ್ದಾರೆ.
ಮಧ್ಯಾಹ್ನದವರೆಗೆ ಈ ಬಾಳೆಗಿಡ ಹಾಗೆ ಇದ್ದು, ಬಾಳೆಗಿಡಗಳನ್ನು ನೆಟ್ಟ ವಿಚಾರ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರಿ ಸದ್ದು ಮಾಡಿದೆ. ನಂತರ ಪ್ರಯಾಣಿಕರೊಬ್ಬರು ಬಾಳೆಗಿಡ ಹಾಗೂ ಹೆದ್ದಾರಿಯಲ್ಲಿ ಇರಿಸಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.