ನೆಟ್ಟುಮಾಡು ಭಗವತಿ ದೇವಿಯ ಬ್ರಹ್ಮ ಕಳಶ ಮತ್ತು ಪುನರ್ ಪ್ರತಿಷ್ಠಾಪನೆ

ಯವಕಪಾಡಿ ಗ್ರಾಮದ ನೆಟ್ಟುಮಾಡು ಶ್ರೀ ಭಗವತಿ ಮಹಿಷ ಮರ್ದಿನಿ.
ಯವಕಪಾಡಿ ಗ್ರಾಮದ ನೆಟ್ಟುಮಾಡು ಶ್ರೀ ಭಗವತಿ ಮಹಿಷ ಮರ್ದಿನಿ.
Published on
ನಾಪೋಕ್ಲು: ಸಮೀಪದ ಕಕ್ಕಬ್ಬೆಯ ಯವಕಪಾಡಿ ಗ್ರಾಮದ ನೆಟ್ಟುಮಾಡು ಭಗವತಿ ದೇವಿಯ ಬ್ರಹ್ಮ ಕಳಶ ಮತ್ತು ಪುನರ್ ಪತಿಷ್ಠಾಪನೆಯು ಮಾ.22ರಿಂದ ಆರಂಭಗೊಂಡಿದ್ದು ಮಾ.25ರವರೆಗೆ ನಡೆಯಲಿದೆ.
ನೆಟ್ಟು ಮಾಡು ಭಗವತಿ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ಪ್ರಾಸಾದದಲ್ಲಿ ದೇವ ಸಾನ್ನಿಧ್ಯ ಬಿಂಬ ಪುನರ್ ಪ್ರತಿಷ್ಠೆ, ಅಷ್ಟ ಬಂಧ ಲೇಪನ, ಬ್ರಹ್ಮ ಕಳಶ ಕಾರ್ಯಕ್ರಮವು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಕೂಡುಕಟ್ಟಿನ ಯಜಮಾನತ್ವದಲ್ಲಿ ಜರುಗಲಿದೆ.
ಇದರ ಅಂಗವಾಗಿ ಮಾ.23ರಂದು ಬೆಳಗ್ಗೆ ಗಣಪತಿ ಹೋಮ, ಬಿಂಬಶುದ್ದಿ, ಕಲಶಾಭಿಷೇಕ, ಶಾಂತಿ ಹೋಮ, ಪ್ರಾಯಶ್ಚಿತ ಹೋಮಗಳು ನಡೆಯಲಿವೆ. ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ಮಾ.24ರಂದು ಬೆಳಗ್ಗೆ ಗಣಪತಿ ಹೋಮ, ಸಂಹಾರ ತತ್ವ ಹೋಮ, ಸಂಹಾರ ತತ್ವ ಕಲಶ ಪೂಜೆ, ಸಂಹಾರ ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ದೇವ ಕಲಶ ಪೂಜೆ, ಜೀವದ್ವಾಪನೆ, ಜೀವ ಕಲಶ ನೆರವೇರಲಿದೆ. ಸಂಜೆ ಕುಂಬೇಶ ಕರ್ಕರಿ ಕಲಶ ಪೂಜೆ, ಆದಿವಾಸ ಹೋಮ, ಧ್ಯಾನ ಧೀವಾಸ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ನೆರವೇರಲಿದೆ. ಮಾ.25ರಂದು ಬೆಳಗ್ಗೆ ಗಣಪತಿ ಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10.21 ರಿಂದ 11.30ರ ವೃಷಭ ಲಗ್ನದಲ್ಲಿ ಅಮ್ಮನವರ ಬಿಂಬ ಪ್ರತಿಷ್ಠೆ ಜೀವ ಕಲಶ ಅಭಿಷೇಕ, ಶಿಖರ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ ನಡೆಯಲಿದ್ದು ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net