ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿಗಳ ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಕಾವೇರಪ್ಪ ಅವರನ್ನು ಸನ್ಮಾನಿಸಲಾಯಿತು. ಬಿ.ಎನ್. ಪ್ರಕಾಶ್, ನಾಗೇಶ್ ವರ್ಣೇಕರ್, ಎಂ.ಎನ್. ಉತ್ತಪ್ಪ, ಮೇಕೆರಿರ ಮೋಹನ್ ಮತ್ತಿತರರು ಇದ್ದರು.
ಮನುಷ್ಯನ ಜೀವಿತಾವಧಿಯಲ್ಲಿ ಪರೋಪಕಾರಿತನ ಬದುಕಿನ ಆದ್ಯ ಕರ್ತವ್ಯವಾಗಬೇಕು ಎಂದು ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಕಾವೇರಪ್ಪ ಹೇಳಿದರು. ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮನುಷ್ಯ ಸ್ವಾರ್ಥ ರಹಿತ ಬದುಕಿಗಾಗಿ, ಪರರ ಹಿತಕ್ಕಾಗಿ ಪ್ರಕೃತಿಯಂತೆ ತನ್ನದೆಲ್ಲ ನಿನ್ನದೇ ಎಂಬ ಮನೋಭಾವನೆಯಿಂದ ಜೀವನ ನಡೆಸಬೇಕು. ಇಂತಹ ಜೀವನ ನಡೆಸುವವರಿಗೆ ಆನಂದದ ಬದುಕು ವೃದ್ದಿಸುತ್ತದೆ. ಪರರ ಹಿತಕ್ಕಾಗಿ ಬದುಕು ನಡೆಸುವುದರಲ್ಲಿ ಅಪಾರವಾದ ಸಂತೋಷ ಅಡಗಿದೆ. ತಾನು ತಿನ್ನದೇ ಇದ್ದರೂ ಹಣ್ಣಿನ ಮರ ಇತರರಿಗಾಗಿ ಫಲ ನೀಡಬಲ್ಲದು. ಇದರಲ್ಲಿ ಯಾವುದೇ ಸ್ವಾರ್ಥತನ ಅಡಗಿರುವುದಿಲ್ಲ ಎಂಬುವುದನ್ನು ಪರಿಗಣಿಸಿ ಜೀವನ ನಡೆಸಬೇಕೆಂದರು.
ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಸಂಘ ಜೀವಿಯಾಗಿ, ಈ ಜೀವನದ ಮೌಲ್ಯಗಳೊಂದಿಗೆ ಸಮಾಜಮುಖಿಯಾಗಿ ಜನಪರ ನಿಲುವುಗಳೊಂದಿಗೆ ಜನ ಪ್ರಯೋಜಿತ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆ ತನ್ನ ಕರ್ತವ್ಯವಾಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪ್ರತಿಷ್ಠಾಪಿಸಿ ವಿತರಿಸಲಾಗುತಿz.ೆ ಈ ಬಾರಿ ಮೂರು ವಿದ್ಯಾರ್ಥಿಗಳಿಗೆ ದತ್ತಿನಿಧಿಯನ್ನು ವಿತರಿಸಲಾಗುತ್ತಿದೆ. ಜತೆಗೆ ಸಂಸ್ಥೆಯು ಕಾನೂನು ಅರಿವು ಕಾರ್ಯಗಾರ, ರಕ್ತದಾನ ಶಿಬಿರ ಸೇರಿದಂತೆ ಹಲವಾರು ಜನಪರ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಂಡು ನಿಭಾಯಿಸಿದೆ ಎಂದು ಹೇಳಿದರು.
ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾದ ಕೆ.ಆರ್. ಅಂಜಲಿ, ಎಂ.ಕೆ. ಮುತ್ತಮ್ಮ, ಕೆ.ಬಿ. ಅಂಕಿತ ಚೋಂದಮ್ಮ ಇವರುಗಳಿಗೆ ತಲಾ ಹತ್ತು ಸಾವಿರ ರೂ. ದತ್ತಿ ನಿಧಿಯನ್ನು ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕಾವೇರಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಗೇಶ್ ವರ್ಣೇಕರ್, ರಾಷ್ಟ್ರೀಯ ಸಂಯೋಜಕ ಎಂ.ಎನ್. ಉತ್ತಪ್ಪ ಖಜಾಂಜಿ ಮೇಕೆರಿರ ಮೋಹನ್ ಪ್ರಮುಖರಾದ ಎಸ್.ಎಸ್. ತಿಮ್ಮಯ್ಯ, ಕೆ.ಬಿ. ಸಂಜೀವ್, ಆಶಿಕ್ ಚೆಂಗಪ್ಪ, ಜಿತೇಂದ್ರ, ಮೂಕಳೇರ ದಿಲ್‌ಕುಮಾರ್ ಮತ್ತಿತರರು ಇದ್ದರು.