ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ಮಾತನಾಡಿ, ಸುಭದ್ರ ಭಾರತ ದೇಶ ಕಟ್ಟುವಲ್ಲಿ ಶ್ರಮಿಕರ ಕೊಡುಗೆ ಅಪಾರವಾಗಿದೆ. ದುಡಿಯುವ ಜನರಿಗೆ ಸೂರಿಲ್ಲದಂತಹ ಹೀನ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ದೂರಿದ್ದಾರೆ. ಗರಗಂದೂರು ಗ್ರಾಮದ ಸ.ನಂ. 40/1ರಲ್ಲಿ 46 ಎಕರೆ ಪೈಸಾರಿ ಜಾಗವಿದ್ದು, ಇದರಲ್ಲಿ 12 ಸೆಂಟ್ಸ್ ಜಾಗವನ್ನು ಮಿನಿ ಆರೋಗ್ಯ ಕೇಂದ್ರಕ್ಕೆ ನೀಡಬಹುದು ಎಂದು ತಹಸೀಲ್ದಾರ್ ವರದಿ ನೀಡಿದ್ದಾರೆ. ಉಳಿದಿರುವ ಜಾಗವನ್ನು ಗುರುತಿಸಿ ಧರಣಿ ನಿರತರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಅಲ್ಲಿಯವರೆಗೂ ಹೋರಾಟ ನಿರಂತರವಾಗಿರಲಿದೆ ಎಂದರಲ್ಲದೆ, ಈ ಸಂಬಂಧಿತ ಮನವಿಯನ್ನು ಅಧಿಕಾರಿಗಳಿಗೆ ಸಲ್ಲಿಸಿ, ಧರಣಿ ಮುಂದುವರಿಸಿದರು.