ಸೈಬರ್ ವಂಚಕರ ಜಾಲಕ್ಕೆ ಸಿಲುಕುತ್ತಿರುವ ಜನರು

ಕೊಡಗು ಎಸ್‌ಪಿ ಕಚೇರಿ
ಕೊಡಗು ಎಸ್‌ಪಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ತಂತ್ರಜ್ಞಾನದ ದುರುಪಯೋಗದಿಂದ ವಂಚನೆ
  • ಸಾಮಾಜಿಕ ಪಿಡುಗಲ್ಲ.. ಇದೊಂದು ಶಾಪ
  • ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದಲ್ಲ
ಮಡಿಕೇರಿ:
ತಂತ್ರಜ್ಞಾನ ಬೆಳೆದಂತೆ ಅದನ್ನೇ ಬಳಸಿಕೊಂಡು ವಂಚಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವುದು ಒಂದು ಕಡೆಯಾದರೆ ಆದರೆ ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರ ಜಾಲಕ್ಕೆ ಜನಸಾಮಾನ್ಯರು ಸಿಲುಕಿ ನರಳುತ್ತಿದ್ದಾರೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರೂ ಇರುತ್ತಾರೆ ಎನ್ನುವ ಮಾತಿನಿಂತೆ ಇಂಥ ವಂಚನೆಗಳಿAದ ಪಾರಾಗಲು ಸ್ವಯಂ ಜಾಗೃತಿಯೇ ಪರಿಹಾರವಾಗಿದೆ.
ಪುಟ್ಟ ಜಿಲ್ಲೆ ಕೊಡಗಿನಲ್ಲೂ ಸೈಬರ್ ಅಪರಾಧಗಳ ಸಂಖ್ಯೆ ಏರುಗತಿಯಲ್ಲಿದೆ. ಕಳೆದ 5 ವರ್ಷಗಳಲ್ಲಿ ವಿವಿಧ ಸೈಬರ್ ಅಪರಾಧಗಳಿಗೆ ಸಂಬAಧಿಸಿದAತೆ 429 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಹ್ಯಾಕರ್‌ಗಳು ಕೇವಲ ಹಣ ಗಳಿಸುವುದಕ್ಕಾಗಿ ಮಾಲ್ ವೇರ್, ವೈರಸ್ ಅಥವಾ ಟ್ರೊಜರ್‌ಗಳ ಮೂಲಕ ಕಂಪ್ಯೂಟರ್, ಮೊಬೈಲ್‌ಗಳ ಮೇಲೆ ದಾಳಿ ನಡೆಸಿ ವೈಯಕ್ತಿಕ ಮತ್ತು ರಹಸ್ಯ ಮಾಹಿತಿ ಕದಿಯುತ್ತಿದ್ದಾರೆ. ನೇರವಾಗಿ ಬ್ಯಾಂಕ್ ಖಾತೆಗಳಿಗೂ ಕನ್ನ ಹಾಕುತ್ತಿದ್ದಾರೆ. ಈಗ ಎಐ ಬಳಸುವ ಮೂಲಕ ಮೋಸ ಮಾಡುವ ಸುಲಭ ದಾರಿಗಳನ್ನೂ ಸೈಬರ್ ವಂಚಕರು ರೂಢಿಸಿಕೊಂಡಿದ್ದಾರೆ.
ಕೊಡಗಿನಂಥ ಪ್ರದೇಶಗಳಲ್ಲಿ ಸೈಬರ್ ಅಪರಾಧಗಳು ಇತ್ತೀಚೆಗೆ ಕೇವಲ ಸಾಮಾಜಿಕ ಪಿಡುಗಲ್ಲ. ಒಂದು ಶಾಪವೇ ಆಗಿ ಪರಿಣಮಿಸಿದೆ. ರಾಜ್ಯ ಮಟ್ಟದಲ್ಲಿ ಸೈಬರ್ ಅಪರಾಧಗಳಿಗೆ ಪರಿಣಾಮಕಾರಿಯಾದಂಥ ಯಾವುದೇ ಪರಿಹಾರವಾಗಲಿ ನಿಯಂತ್ರಣಕಾರಿ ತಂತ್ರಜ್ಞಾನವಾಗಲಿ ಲಭ್ಯವಿಲ್ಲ. ಆದರೆ ಕೇಂದ್ರದಲ್ಲಿ ಮಾತ್ರ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಒಂದೇ ಒಂದು ಗವಾಕ್ಷಿ ಲಭ್ಯವಿದೆ. ಸೈಬರ್ ವಂಚನೆಗೆ ಒಳಗಾದಾಗ ಬಹುತೇಕ ಸಂದರ್ಭಗಳಲ್ಲಿ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಅಲ್ಲಿ ಈ ಬಗೆಯ ಸಮಸ್ಯೆಯನ್ನು ಸಮರ್ಥವಾಗಿ ಅರ್ಥ ಮಾಡಿಕೊಳ್ಳುವ ತಂತ್ರಜ್ಞಾನದ ನಿಪುಣತೆ ಇರುವಂಥ ಸೌಲಭ್ಯ ವಿರಳ. ಇದು ಕೂಡ ಸೈಬರ್ ಅಪರಾಧಿಗಳನ್ನು ಮಟ್ಟಹಾಕುವಲ್ಲಿ ಒಂದು ಹಿನ್ನಡೆ ಆಗಿದೆ ಎನ್ನುವ ಅಭಿಪ್ರಾಯಗಳಿವೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
"

ಕಾರ್ಯಗಾರ ನಡೆಸಬೇಕು 1. ಯುವಜನತೆಗೆ ಸೈಬರ್ ಕ್ರೈಂ ಬಗ್ಗೆ ತಕ್ಕ ಮಟ್ಟಿಗಿನ ತಿಳುವಳಿಕೆ ಇದೆ. ಆದರೆ ಮಧ್ಯ ವಯಸ್ಕರು ಮತ್ತು ಹಿರಿಯರಿಗೆ ಇತ್ತೀಚಿನ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ಪ್ರತಿ ಗ್ರಾಮ ಮಟ್ಟದಲ್ಲಿ ಸರ್ಕಾರದ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಬೇಕು. ಸರ್ಕಾರ ಗರಿಷ್ಠ ಕಾರ್ಯಕ್ಷಮತೆಯ ವಿನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಕಾರ್ಯಪ್ರವೃತ್ತರಾದರೆ ಸೈಬರ್ ಕ್ರಿಮಿಗಳನ್ನು ಮಟ್ಟ ಹಾಕಬಹುದು.

"

ಕೊಡಗು ಜಿಲ್ಲೆಯಲ್ಲಿ ಪೂರ್ಣಕಾಲಿಕ ಸೈಬರ್ ಕ್ರೈಂ ಘಟಕ ಮತ್ತಷ್ಟು ಬಲಪಡಿಸಬೇಕು. ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಸೈಬರ್ ಕ್ರೈಂ ನೊಡಲ್ ಅಧಿಕಾರಿ ನೇಮಿಸಬೇಕು. ದೂರು ನೀಡಲು ವಿಳಂಬವಾಗದAತೆ ತ್ವರಿತ ಪ್ರತಿಕ್ರಿಯೆ ತಂಡ ರಚಿಸಬೇಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೈಬರ್ ಜಾಗೃತಿ ಶಿಬಿರಗಳು ನಡೆಸಬೇಕು

"

ಕೊಡಗಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು ಎಲ್ಲರಿಗೂ ಅರಿವಿದೆ. ವಿದ್ಯಾವಂತರೇ ಹೆಚ್ಚಾಗಿ ಸಂತ್ರಸ್ತರಾಗುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಜನರಲ್ಲಿ ಸೈಬರ್ ಅರಿವು ಹೆಚ್ಚಿಸುವುದು, ಅನುಮಾನಾಸ್ಪದ ಲಿಂಕ್‌ಗಳಿAದ ದೂರವಿರುವುದು ಹಾಗೂ ತಕ್ಷಣ ಪೊಲೀಸರಿಗೆ ದೂರು ನೀಡುವುದು ಮುಖ್ಯ ಪರಿಹಾರವಾಗಿದೆ.

"

ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಸ್ವ ಜಾಗೃತಿ ವಹಿಸಬೇಕಾಗಿದೆ. ಶಾಲಾ ಕಾಲೇಜು ಮಟ್ಟದಲ್ಲಿಯೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಜನರು ಸಾಮಾಜಿಕ ಜಾಲತಾಣದಲ್ಲಿ ಬರುವ ಯಾವುದೋ ಅನಾಮಧೇಯ ಮಾಹಿತಿ ಅಥವಾ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು. ಸಾಮಾಜಿಕ ಜಾಲತಾಣಗಳನ್ನು ಉತ್ತಮ ರೀತಿಯಲ್ಲಿ ಬಳಸುವಂತಾಗಬೇಕು. ಸೈಬರ್ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

"

ಇತ್ತೀಚಿನ ದಿನಗಳಲ್ಲಿ ಲಿಂಕ್‌ಗಳ ಮೂಲಕ ಹಣ ಗಳಿಸುವುದು ಅಥವಾ ಇನ್ನಿತರ ವಿಚಾರಗಳನ್ನು ತಿಳಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಉಪಯೋಗಿಸಿ ಜನರನ್ನು ವಂಚನೆಗೆ ಒಳಪಡಿಸಲಾಗುತ್ತಿದೆ. ಆದಷ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಈ ಕುರಿತ ಜಾಗೃತಿ ಮೂಡಿಸಿ ಅವರುಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕು. ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ವಂಚನೆಗಳು ನಡೆಯುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಬೇಕು.

"

ಯಾವುದೇ ಅನಾಮಧೇಯ ಮೂಲಗಳು, ಸಂಶಯಾಸ್ಪದ ವ್ಯಕ್ತಿಗಳು, ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿ ಇರಬೇಕು. ಇಂಥ ಅಪ್ಲಿಕೇಷನ್ ಲಿಂಕ್‌ಗಳು ಶೇರ್ ಆದಲ್ಲಿ ಕೂಡಲೇ ಸೈಬರ್ ಕ್ರೆöÊಂ ಸ್ಟೇಷನ್‌ಗೆ ಮಾಹಿತಿ ಕೊಡಬೇಕು. ಹೀಗೆ ಮಾಡುವುದರಿಂದ ಮೋಸಕ್ಕೆ ಒಳಗಾಗುವುದು ತಪ್ಪುತ್ತದೆ. ಬೇರೆಯವರೂ ಇದಕ್ಕೆ ಬಲಿಯಾಗದಂತೆ ಎಚ್ಚೆತ್ತುಕೊಳ್ಳಲು ಸಹಕಾರಿ ಆಗುತ್ತದೆ. ಒಂದು ವೇಳೆ ಸೈಬರ್ ಅಪರಾಧ ಜಾಲಕ್ಕೆ ಸಿಲುಕಿದರೆ, ಮೋಸಕ್ಕೆ ಒಳಗಾದರೆ 1930 ಸೈಬರ್ ಕ್ರೆöÊಂ ಹೆಲ್ಪ್ಲೈನ್ ಸಂಪರ್ಕಿಸಬೇಕು. ಗೋಲ್ಡನ್ ಅವರ್‌ನಲ್ಲಿ ಮಾಹಿತಿ ಕೊಡುವುದರಿಂದ ಹೆಚ್ಚಿನ ನಷ್ಟ ಆಗುವುದರಿಂದ ಪಾರಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net