ಕೆಸರುಮಯ ರಸ್ತೆಗೆ ಜನರು ಹೈರಾಣ

ಖಾಸಗಿ ಶಾಲೆಯ ಬಸ್ ಒಂದು ಕೆಸರಿನಲ್ಲಿ ಹೂತು ಹೋಗಿ ಸಮಸ್ಯೆ.
ಖಾಸಗಿ ಶಾಲೆಯ ಬಸ್ ಒಂದು ಕೆಸರಿನಲ್ಲಿ ಹೂತು ಹೋಗಿ ಸಮಸ್ಯೆ.
Published on

ನಾಪೋಕ್ಲು:

ಸಮೀಪದ ಚೆರಿಯಪರಂಬು-ಕಲ್ಲುಮೊಟ್ಟೆಗೆ ತೆರಳುವ ರಸ್ತೆಯ ದುಸ್ಥಿತಿಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಜನಸಾಮಾನ್ಯರು ನಡೆದಾಡಲೂ ಸಮಸ್ಯೆ ಉಂಟಾಗಿದೆ.

ಚೆರಿಯಪರಂಬು ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಇಲ್ಲಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುತ್ತಿದ್ದಾರೆ. ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗಾಗಿ ಪೇಟೆಯನ್ನು ಅವಲಂಬಿಸಿರುವುದು ಅನಿವಾರ್ಯ. ಆದರೆ ಈ ರಸ್ತೆಯಲ್ಲಿ ನಡೆದಾಡುವುದು ಅಸಾಧ್ಯವಾಗಿದೆ. ರಸ್ತೆ ಪೂರ್ತಿ ಗುಂಡಿಮಯವಾಗಿದ್ದು, ಕೆಸರು ತುಂಬಿಕೊಂಡು ಸಮಸ್ಯೆಗಳ ಸರಮಾಲೆ ಸೃಷ್ಟಿಸಿದೆ.
ಖಾಸಗಿ ವಾಹನಗಳು, ಆಟೋಗಳು ಸೇರಿದಂತೆ ಶಾಲಾ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಸೋಮವಾರ ಖಾಸಗಿ ಶಾಲೆಯ ಬಸ್ ಕೆಸರಿನಲ್ಲಿ ಸಿಲುಕಿ ಸಮಸ್ಯೆ ಉಂಟಾಯಿತು. ರಸ್ತೆಯಲ್ಲಿ ಮಣ್ಣು ಸುರಿದಿದ್ದ ಪರಿಣಾಮ ಮಳೆ ನೀರು ಸೇರಿ ಸಂಪೂರ್ಣ ಕೆಸರುಮಯವಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ತುರ್ತಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net