ವಿರಾಜಪೇಟೆ: ಕನ್ನಡ ಸಾಹಿತ್ಯ, ಸಂಗೀತ, ಸಂಘಟನೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಲೇಖಕಿ ಪ್ರತಿಮಾ ಹರೀಶ್ ರೈ ಅ ವರಿಗೆ ಇತ್ತೀಚೆಗೆ ಪಯಸ್ವಿನಿ ಅಚೀವ್‌ಮೆಂಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಭವನದ ರಜತ ಸಂಭ್ರಮದ ಪ್ರಯುಕ್ತ ಇತ್ತೀಚೆಗೆ ಕಾಸರಗೋಡಿನ ನುಳ್ಳಿಪ್ಪಾಡಿ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂಲತಃ ಮಡಿಕೇರಿಯವರಾದ ಅವರು ವಿರಾಜಪೇಟೆ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.