ಸಮೀಪದ ಪಾಲೂರು ಕೊಡವಾಮೆ ಕೂಟದ ವತಿಯಿಂದ ಈಚೆಗೆ 20ನೇ ವರ್ಷದ ಪಾಲೂರು ಊರೋರ್ಮೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾ ಮೇಪಾಡಂಡ ಸವಿತಾ ಕೀರ್ತನ್ ಅವರನ್ನೂ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು. ಪಾಲೂರು ಕೊಡವಾಮೆ ಕೂಟದ ಅಧ್ಯಕ್ಷ ಮಂದನೆರವAಡ ಹರೀಶ್ ಸೋಮಯ್ಯ, ಅಂತಾರಾಷ್ಟಿçÃಯ ಮಾಸ್ಟರ್ ಅಥ್ಲೆಟ್ ಮುಲ್ಲೇರ ಪೊನ್ನಮ್ಮ, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಮೇಪಾಡಂಡ ಸಿ. ಕುಟ್ಟಪ್ಪ ಮತ್ತಿತರರು ಈ ಸಂದರ್ಭ ಇದ್ದರು.