ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಲೀಡಿಂಗ್ ಎಡ್ಜ್ ಅಡ್ವರ್ಟೈಸಿಂಗ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಕೃತಿಯಿಂದ ಸ್ಫೂರ್ತಿ ಪಡೆಯೋಣ, ಹವಾಮಾನ ಸಂರಕ್ಷಣೆಗಾಗಿ, ನಮ್ಮೆಲ್ಲರ ಭವಿಷ್ಯಕ್ಕಾಗಿ ಎನ್ನುವ ವಿಷಯಕ್ಕೆ ಸಂಬAಧಿಸಿದAತೆ ಮಕ್ಕಳು ತಮ್ಮ ಕಲ್ಪನೆಯಲ್ಲಿ ಅರಳಿದ ಚಿತ್ರಗಳನ್ನು ಕಾಗದದ ಮೇಲೆ ಮೂಡಿಸಿದರು. ಮಕ್ಕಳ ಚಿತ್ರಗಳಲ್ಲಿ ಪರಿಸರ ಕಾಳಜಿ ಎದ್ದು ಕಾಣುತ್ತಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ಬಿಡಿಸಿದ ಎಲ್ಲಾ ಚಿತ್ರಗಳ ಬಗ್ಗೆಯೂ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಅತ್ಯುತ್ತಮವಾದ ಚಿತ್ರಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಯಿತು. 5ರಿಂದ 7ನೇ ತರಗತಿ ವಿಭಾಗದಲ್ಲಿ ಮದೆನಾಡು ಬಿಜಿಎಸ್ ಪಬ್ಲಿಕ್ ಶಾಲೆಯ ಗಾನವಿ ಬಿ.ಸಿ. ಪ್ರಥಮ, ಸೆಂಟ್ ಆನ್ಸ್ ಶಾಲೆಯ ಅಬೆಲ್ ವರ್ಗೀಸ್ ದ್ವಿತೀಯ ಹಾಗೂ ಮಡಿಕೇರಿ ಪಿಎಂಶ್ರೀ ಶಾಲೆಯ ಶ್ರಾವಣಿ ತೃತೀಯ ಸ್ಥಾನ ಗಳಿಸಿದರು. 8ರಿಂದ 10ನೇ ತರಗತಿ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಟಿ.ಎಸ್. ಸಾನ್ವಿ ಪ್ರಥಮ, ಮಡಿಕೇರಿ ಸೆಂಟ್ ಮೈಕೆಲ್ ಶಾಲೆಯ ಪಿ.ಎನ್. ಸಚಿನ್ ದ್ವಿತೀಯ ಹಾಗೂ ಇದೇ ಶಾಲೆಯ ಎಂ.ಎA. ಹಿತನ್ ತೃತೀಯ ಬಹುಮಾನ ಪಡೆದುಕೊಂಡರು. ಎರಡೂ ವಿಭಾಗದಲ್ಲೂ ಪ್ರಥಮ 1,500 ರೂ., ದ್ವಿತೀಯ 1,000 ರೂ. ಹಾಗೂ ತೃತೀಯ 500 ರೂ. ನಗದು ಬಹುಮಾನ ನೀಡಲಾಯಿತು.