'ಮಡಿಕೇರಿ ರಸ್ತೆಯಲ್ಲಿ ಮೀನು ಸಾಕಾಣಿಗೆ ರಸ್ತೆಯಲ್ಲಿ ಗುಂಡಿಗಳು ಲಭ್ಯವಿದೆ. ಮಧ್ಯವರ್ತಿಗಳಿಗೆ ಅವಕಾಶ ಇಲ್ಲ.', 'ನಮ್ಮೂರಿಗೆ ಹಾರುವ ಕಾರಿನ ವ್ಯವಸ್ಥೆ ಮಾಡಿ', 'ಕಪ್ಪೆಯಂತೆ ರಸ್ತೆಯಲ್ಲಿ ಗುಂಡಿಯಿAದ ಗುಂಡಿಗೆ ಹಾರುವ ಚಾಲೆಂಜ್', 'ತೀವ್ರ ಮಳೆ ಕೊರತೆ, ರಸ್ತೆಯಲ್ಲಿ ಬತ್ತಿ ಹೋದ ಕೃಷಿ ಹೊಂಡಗಳು', 'ಹಾರುವ ಕಾರಿನ ವ್ಯಾಪಾರಕ್ಕೆ ಭರ್ಜರಿ ಬೇಡಿಕೆ', 'ರಸ್ತೆ ಗುಂಡಿಯಲ್ಲಿ ಅರಳಿದ ಭಾರತ ಮ್ಯಾಪ್', 'ರಸ್ತೆಯ ಮೇಲೊಂದು ಸುಸಜ್ಜಿತ ಈಜುಕೊಳ', ಹೀಗೆ ವಿವಿಧ ರೀತಿಯ ಅಡಿಬರಹಗಳ ಜತೆ ಹಾಳಾದ ರಸ್ತೆಗಳ ಚಿತ್ರಗಳು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಜನಪ್ರಿಯ ಕಾರ್ಟೂನ್ ಪಾತ್ರಧಾರಿಗಳಾದ ಮೋಟು-ಪಟ್ಲು ಬಳಸಿಕೊಂಡು ಕೂಡ ಮೀಮ್‌ಗಳನ್ನು ಹಾಸ್ಯಮಯವಾಗಿ ರಚಿಸಲಾಗುತ್ತಿದ್ದು ಪ್ರತಿದಿನವೂ ಆಡಳಿತ ವ್ಯವಸ್ಥೆಯ ವಿರುದ್ಧ ವ್ಯಂಗ್ಯದ ಬಾಣಗಳನ್ನು ಬಿಡಲಾಗುತ್ತಿದೆ.