ಹಿಂದೂ ದೇವರನ್ನು ಟೀಕಿಸಿದ್ದಕ್ಕೆ ಆಕ್ರೋಶ

ವಿರಾಜಪೇಟೆಯ ಗಡಿಯಾರ ಕಂಬದ ಬಳಿ ಶ್ರೀ ಸ್ವಾಮಿ ಅಯ್ಯಪ್ಪ ಉತ್ಸವ ಸಮಿತಿ ಹಾಗೂ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು. ಅರುಣ್, ಮಣಿಕಂಠ, ಸಂಜು, ಸುರೇಶ್ , ಅನಿಲ್ ಇದ್ದರು.
ವಿರಾಜಪೇಟೆಯ ಗಡಿಯಾರ ಕಂಬದ ಬಳಿ ಶ್ರೀ ಸ್ವಾಮಿ ಅಯ್ಯಪ್ಪ ಉತ್ಸವ ಸಮಿತಿ ಹಾಗೂ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು. ಅರುಣ್, ಮಣಿಕಂಠ, ಸಂಜು, ಸುರೇಶ್ , ಅನಿಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದ ಸನ್ನಿ ಕಪಿಕಾಡ್ ವಿರುದ್ಧ ಪ್ರತಿಭಟನೆ
  • ಶ್ರೀ ಸ್ವಾಮಿ ಅಯ್ಯಪ್ಪ ಉತ್ಸವ ಸಮಿತಿಯಿಂದ ಧರಣಿ
ವಿರಾಜಪೇಟೆ : ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೇರಳದ ಸನ್ನಿ ಕಪಿಕಾಡ್ ವಿರುದ್ಧ ವಿರಾಜಪೇಟೆಯಲ್ಲಿ ಇತ್ತೀಚೆಗೆ ಶ್ರೀ ಸ್ವಾಮಿ ಅಯ್ಯಪ್ಪ ಉತ್ಸವ ಸಮಿತಿ ಹಾಗೂ ಅಯ್ಯಪ್ಪ ಭಕ್ತಾದಿಗಳ ವತಿಯಿಂ ಪ್ರತಿಭಟನೆ ನಡೆಸಲಾಯಿತು.
ಶ್ರೀ ಅಯ್ಯಪ್ಪಸ್ವಾಮಿ ಹಾಗೂ ಮಾಳಿಗೆಪುರದಮ್ಮ ದೇವರ ಕುರಿತು ಕೇರಳದ ಸನ್ನಿ ಕಪಿಕಾಡ್ ನೀಡಲಾಗಿದೆ ಎನ್ನಲಾದ ಹೇಳಿಕೆಗಳಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶ್ರೀ ಸ್ವಾಮಿ ಅಯ್ಯಪ್ಪ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್, ಅಯ್ಯಪ್ಪ ಸ್ವಾಮಿ ಕುರಿತು ನೀಡಿರುವ ಹೇಳಿಕೆ ಹಿಂದೂ ಬಾಂಧವರ ಭಾವನೆಗಳಿಗೆ ನೋವುಂಟು ಮಾಡಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅನಿಲ್ ಮಾತನಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷ ಮಣಿಕಂಠ, ಸಹ ಕಾರ್ಯದರ್ಶಿ ಸಂಜು, ಅಯ್ಯಪ್ಪ ಉತ್ಸವ ಸಮಿತಿ ಪದಾಧಿಕಾರಿಗಳು, ಬಜರಂಗದಳದ ಕಾರ್ಯಕರ್ತರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net