ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅಭಿವಿನ್ಯಾಸ ಕಾರ್ಯಕ್ರಮವನ್ನು ಹಾಸನದ ಸರ್ಕಾರಿ ಕಲಾ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅನುಪಮ ಸಭಾಪತಿ ಉದ್ಘಾಟಿಸಿದರು. ಡಾ. ವೆಂಕಟೇಶ ಪ್ರಸನ್ನ, ಡಾ. ಎಸ್.ಜಿ. ಚೈತ್ರಾ, ಡಾ. ದೀಕ್ಷಿತಾ ವರ್ಕಾಡಿ, ಪ್ರೊ. ಎ.ಎಸ್. ಅನುರಾಧ, ಪ್ರೊ. ಟಿ.ಎಮ್. ಸುಧಾಕರ್ ಮತ್ತಿತರರು ಇದ್ದರು.

Published on
ಮಡಿಕೇರಿ:
ಇಂದಿನ ತಂತ್ರಜ್ಞಾನ ಯುಗದಲ್ಲಿ ಜೆನ್‌ಝಿ ಪೀಳಿಗೆ ತಾಂತ್ರಿಕ ಕೌಶಲಗಳಲ್ಲಿ ಅದ್ಭುತ ಪ್ರದರ್ಶನ ನೀಡುವುದರ ಜತೆಗೆ ಸಂವಹನ ಕೌಶಲ್ಯ, ಬಾಂಧವ್ಯಗಳ ನಿರ್ವಹಣೆ ಹಾಗೂ ಗಮನವಿಟ್ಟು ಕೆಲಸ ಮಾಡುವ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಹಾಸನದ ಸರ್ಕಾರಿ ಕಲಾ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅನುಪಮ ಸಭಾಪತಿ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಆಯೋಜಿಸಲಾಗಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ತಂತ್ರಜ್ಞಾನದ ಅಡ್ಡ ಪರಿಣಾಮಗಳಿಗೆ ಬಲಿಯಾಗದೆ, ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಗಮನವನ್ನು ನಿಗದಿತ ಗುರಿಯತ್ತ ಕೇಂದ್ರೀಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ ಪ್ರಸನ್ನ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಧ್ಯಪಕರಾದ ಡಾ. ಎಸ್.ಜಿ. ಚೈತ್ರಾ, ಡಾ. ದೀಕ್ಷಿತಾ ವರ್ಕಾಡಿ, ಪ್ರೊ. ಎ.ಎಸ್. ಅನುರಾಧ, ಪ್ರೊ. ಟಿ.ಎಮ್. ಸುಧಾಕರ್, ಕಚೇರಿ ಮುಖ್ಯಸ್ಥ ಎಂ. ಬಿ. ಆನಂದ್, ಸಹಾಯಕ ಪ್ರಾಧ್ಯಾಪಕ ಧನರಾಜ್ ಕುಮಾರ್, ಉಪನ್ಯಾಸಕಿ ಸುಪ್ರಿಯಾ, ಜಶ್ಮಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net