ಎಐ ಮಾನವನಿಗೆ ಪರ್ಯಾಯವಲ್ಲ, ಸಹಾಯಕ ಸಾಧನ

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ರಾಘವ.ಬಿ, ಪಿ.ವಿ.ಸುಬ್ರಮಣಿ, ಡಾ.ಕೆ.ಸೌಮ್ಯ ಇತರರಿದ್ದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ರಾಘವ.ಬಿ, ಪಿ.ವಿ.ಸುಬ್ರಮಣಿ, ಡಾ.ಕೆ.ಸೌಮ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐ ಮಾನವನಿಗೆ ಪರ್ಯಾಯವಲ್ಲ, ಸಹಾಯಕ ಸಾಧನ
ಮಡಿಕೇರಿ: ಇಂದಿನ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮಾನವನಿಗೆ ಪರ್ಯಾಯವಲ್ಲ, ಬದಲಾಗಿ ಮಾನವನ ಜ್ಞಾನ, ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿಶಾಲಿ ಸಹಾಯಕ ಸಾಧನವಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ.ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ಹನಿವೆ ಫ್ಯೂಚರ್ ಸ್ಕಿಲ್ಸ್ ಎಡ್ಜ್ ಪ್ರೋಗ್ರಾಮ್ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ, ಸಂಶೋಧನೆ, ಉದ್ಯೋಗ, ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಐ ಬಳಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಡಿಜಿಟಲ್ ಲಿಟರಸಿ, ಕ್ರಿಟಿಕಲ್ ಥಿಂಕಿಂಗ್, ಪ್ರಾಬ್ಲಮ್ ಸಾಲ್ವಿಂಗ್, ಕಮ್ಯುನಿಕೇಷನ್, ಕ್ರಿಯೇಟಿವಿಟಿ ಹಾಗೂ ಸೈಬರ್ ಸೆಕ್ಯೂರಿಟಿ ಅರಿವಿನಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭರತ್ ಕೇರ್ಸ್‌ನ ಸೀನಿಯರ್ ಎಂಗೇಜ್‌ಮೆಂಟ್ ಅಸೋಸಿಯೇಟ್ ಪಿ.ವಿ.ಸುಬ್ರಮಣಿ ಸಂಪನ್ಮೂಲ ವ್ಯಕ್ತಿಯಾಗಿ ಎಐ ಮೂಲಭೂತ ಪರಿಕಲ್ಪನೆ, ಪ್ರಾಯೋಗಿಕ ಬಳಕೆ ಮತ್ತು ಸೈಬರ್ ಸುರಕ್ಷತೆ ಕುರಿತು ಮಾರ್ಗದರ್ಶನ ನೀಡಿದರು.
ಇದೇ ವೇಳೆ ಕಾಲೇಜು ಮತ್ತು ಭರತ್ ಕೇರ್ಸ್ ಆರ್ಗನೈಸೇಷನ್ ನಡುವೆ ಮೂರು ವರ್ಷಗಳ ಎಂಒಯು ಒಡಂಬಡಿಕೆಗೆ ಸಹಿ ಹಾಕಲಾಯಿತು. ಐಕ್ಯೂಎಸಿ ಸಂಚಾಲಕಿ ಡಾ.ಕೆ.ಸೌಮ್ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕೆ.ಶೈಲಶ್ರೀ, ಅಲೋಕ್ ಬೆಜೈ, ಡಾ.ಎಚ್.ಕೆ.ರೇಣುಶ್ರೀ, ಡಾ.ಚಂದ್ರಯ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net