ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟಕ್ಕೆ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಚಾಲನೆ ನೀಡಿದರು. ಎನ್.ಎನ್ ದಿನೇಶ್, ಎಚ್.ಕೆ ಕುಮಾರ್, ಸತೀಶ್ ಬಿ.ಆರ್, ರಮಾನಂದ ಟಿ.ಡಿ ಮತ್ತಿತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದತ್ತಿನಿಧಿ ಸ್ಥಾಪಿಸಿದ ಉದ್ದೇಶವನ್ನು ಈಡೇರಿಸಲಾಯಿತು.
ಗೋಣಿಕೊಪ್ಪಲು: ಮಂಗಳವಾರ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ದತ್ತಿನಿಧಿ ಸ್ಥಾಪಿಸಿದ ಉದ್ದೇಶವನ್ನು ಈಡೇರಿಸಲಾಯಿತು.
ಮಕ್ಕಳು ಕಪ್ಪೆ ಓಟ, ಬಾಲ್ ಹಾಕುವುದು, ವಿಷದ ಚೆಂಡು, ರಿಂಗ್ ಎಸೆತ, ಟಿನ್ ಒಡೆಯುವುದು ಸೇರಿದಂತೆ ಹಲವಾರು ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಅನುಭವಿಸಿದರು.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ನೇತೃತ್ವದಲ್ಲಿ ಕ್ರೀಡೆಗಳು ನಡೆದವು. ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ. ಕುಮಾರ್, ಶಿಕ್ಷಕರಾದ ಬಿ.ಆರ್.ಸತೀಶ್, ಜೋಸ್ಲಿಯಾ ಎಂ.ಟಿ., ಜಯಶ್ರೀ ಎನ್.ಕೆ., ಇಂದಿರಾ ಎಂ.ಸಿ, ಅನಿತಕುಮಾರಿ ಎಚ್.ಇ. ದಮಯಂತಿ ಎ.ಎಂ, ಅರ್ಶಿಯಾ.ಬಿ, ಕ್ಲ್ಯೆಮಿಂಟನ್, ಎಂ.ಬಿ.ಸಹನ್, ಶಾರದ ಕೆ.ಎಸ್. ನಾಗರಾಜು, ಸ್ನೇಹಾ ಕಾವೇರಮ್ಮ, ಸಿದ್ದರಾಜು,ಎನ್, ಮಂಜುಳಾ ವಿ. ಮತ್ತು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net