ಪ್ರತಿಪಕ್ಷಗಳ ವಿರೋಧ ಖಂಡನೀಯ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Published on
ಮಡಿಕೇರಿ:
ನಾರಿಶಕ್ತಿ ವಂದನ್ ವಿಧೇಯಕ ಜಾರಿ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮತ್ತು ವ್ಯಯಕ್ತಿಕ ವಿಷಯ ತರುವ ಅಗತ್ಯ ಇರಲಿಲ್ಲ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿಕೊಂಡು ಬಂದಿರುವ ಹೆಗ್ಗಳಿಕೆ ಮಹಿಳೆಯರದ್ದು. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲೂ ಮಹಿಳೆಯರ ಪಾತ್ರ ದೊಡ್ಡದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಈಗ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಸಾಧನೆ ತೋರಿಸುತ್ತಿದ್ದಾರೆ. ಇವರು ದೇಶದ ನೀತಿ ನಿರೂಪಣೆಯಲ್ಲೂ ಪ್ರಮುಖ ಪಾತ್ರ ವಹಿಸಬೇಕು ಎನ್ನುವ ಉದ್ದೇಶದಿಂದ ಮಹಿಳೆಯರಿಗೆ ಲೋಕಸಭೆಯಲ್ಲಿ ಶೇ.33ರಷ್ಟು ಪ್ರಾತಿನಿಧ್ಯ ಕಲ್ಪಿಸಲು ಉದ್ದೇಶಿಸಿದ್ದ ವಿಧೇಯಕಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಒಕ್ಕೂಟ ವಿರೋಧ ಮಾಡುತ್ತಿರುವುದು ಖಂಡನೀಯ ಎಂದು ಶನಿವಾರ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾರಿಶಕ್ತಿ ವಂದನ್ ವಿಧೇಯಕಕ್ಕೆ ಸೋಲಾಗಿರುವುದು ನೋವು ತಂದಿದೆ. ಮಹಿಳೆಯರಿಗೂ ಶಾಸನ ಸಭೆಯಲ್ಲಿ ನೀತಿ ನಿರೂಪಣೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವ ಮೂಲಕ ಇತಿಹಾಸ ನಿರ್ಮಿಸಬಹುದಾಗಿದ್ದ ಸುವರ್ಣಾವಕಾಶ ಕಳೆದುಕೊಳ್ಳುವಂತಾಗಿದೆ. ಪ್ರತಿಪಕ್ಷಗಳ ಎಲ್ಲಾ ಸಂಶಯಗಳಿಗೂ ಖುದ್ದು ಪ್ರಧಾನಿ ಅವರೇ ಸ್ಪಷ್ಟನೆಗಳನ್ನು ನೀಡಿದ್ದರು. ಆದರೂ ಪ್ರತಿಪಕ್ಷಗಳು ಮಹಿಳೆಯರ ವಿಚಾರದಲ್ಲಿ ತಮ್ಮ ನಿಲುವು ಏನೆಂಬುದನ್ನು ಜನತೆಯ ಮುಂದೆ ಪ್ರದರ್ಶನ ಮಾಡಿದರು. ಕಾಂಗ್ರೆಸ್ ಮೊದಲಿನಿಂದಲೂ ಮಹಿಳಾ ಮೀಸಲು ಮಸೂದೆಯನ್ನು ವಿರೋಧಿಸಿಕೊಂಡೇ ಬಂದಿದೆ. ತಾಂತ್ರಿಕ ಅಂಶ ಇಟ್ಟುಕೊಂಡು ಮಸೂದೆ ಜಾರಿಯನ್ನು ಮುಂದೂಡಿಕೊAಡು ಬರಲಾಗುತ್ತಿದೆ. ಆದರೂ ಮಹಿಳಾ ಮೀಸಲಾತಿ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು.
ಇದೇ ರೀತಿಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ವಿಷಯದಲ್ಲೂ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟ ಅಪಪ್ರಚಾರ ಮಾಡುತ್ತಿದೆ. ಈ ವಿಷಯಯದಲ್ಲಿ ದಕ್ಷಿಣ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುವುದಿಲ್ಲ ಎಂದು ಗೃಹ ಸಚಿವರೇ ಸ್ಪಷ್ಟನೆ ನೀಡಿದ್ದರೂ ವಿರೋಧ ಖಂಡನೀಯ. ಈ ಹಿಂದೆ ಮಂಗಳೂರಿನೊAದಿಗೆ, ಈಗ ಮೈಸೂರು ಲೋಕಸಭಾ ಕ್ಷೇತ್ರದೊಂದಿಗೆ ಸೇರಿಕೊಂಡಿರುವ ಕೊಡಗಿಗೆ ಪ್ರತ್ಯೇಕ ಪ್ರಾತಿನಿಧ್ಯದ ಅವಕಾಶವೂ ಇತ್ತು. ಆದರೆ ಇದಕ್ಕೂ ಕಾಂಗ್ರೆಸ್ ವಿರೋಧ ಮಾಡಿದೆ. ಕೊಡಗಿಗೆ ಲೋಕಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಬೇಕಿತ್ತು. ಭೌಗೋಳಿಕ, ಜನಸಂಖ್ಯೆ ದೃಷ್ಟಿಯಿಂದ ಇದು ಆಗಬೇಕಿತ್ತು. ಬಿಜೆಪಿ ಮತ್ತು ಪ್ರಧಾನಿಯನ್ನು ವಿರೋಧಿಸುವÀ ಗುರಿ ಇಟ್ಟುಕೊಂಡಿರುವ ಪ್ರತಿಪಕ್ಷಗಳು ರಾಷ್ಟçದ ಹಿತ ಕಾಪಾಡುವ ವಿಷಯಗಳಲ್ಲೂ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯದುವೀರ್ ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತ ಆಗಿಲ್ಲ. ರೈಲ್ವೇ ಯೋಜನೆಗೆ ರಾಜ್ಯ ಸರ್ಕಾರ ಅಡ್ಡಿ ಆಗಿದೆ. ಹಣ ಇಲ್ಲ ಎಂದು ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯೆ ರೀನಾ ಪ್ರಕಾಶ್ ಮಾತನಾಡಿ ಕಾಂಗ್ರೆಸ್ ಮಹಿಳೆಯರ ಕನಸು ನುಚ್ಚುನೂರು ಮಾಡಿದೆ. ಮಹಿಳೆಯರ ವಿರುದ್ಧ ಕಾಂಗ್ರೆಸ್ ಇರುವುದು ಹಿಂದೆಯೇ ಬಯಲಾಗಿತ್ತು. ಇಂದಿರಾಗಾAಧಿ ಕೂಡ ಈ ನಿಟ್ಟಿನಲ್ಲಿ ಯೋಚನೆ ಮಾಡಿರಲಿಲ್ಲ. ವಾಜಪೇಯಿ ಅಧಿಕಾರಕ್ಕೆ ಬಂದ ನಂತರ 7 ಬಾರಿ ಮಸೂಧೆ ಮಂಡನೆ ಮಾಡಿದ್ದರು. ಈ ಸಂದರ್ಭ ಕಾಂಗ್ರೆಸ್ ಮಸೂದೆ ಪ್ರತಿಯನ್ನೇ ಹರಿದು ಹಾಕಿತ್ತು. 27 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಯ್ದೆ ಜಾರಿಯ ಪ್ರಯತ್ನ ಕಾಂಗ್ರೆಸ್‌ನಿAದಾಗಿ ಮತ್ತೆ ವಿಫಲವಾಗಿದೆ. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಈ ಸಂಬAಧ
ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುವುದು. ಮಹಿಳಾ ಮೀಸಲಾತಿ ತರಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಹ್ಮಣಿ, ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net