ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಯೋಜನೆಗೆ ವಿರೋಧ

ಸುದ್ದಿಗೋಷ್ಠಿಯಲ್ಲಿ ಇದ್ದ ಪ್ರಮುಖರು
ಸುದ್ದಿಗೋಷ್ಠಿಯಲ್ಲಿ ಇದ್ದ ಪ್ರಮುಖರು
Published on
ಮಡಿಕೇರಿ:
ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ಗೆ ಕರ್ನಾಟಕ ಸರ್ಕಾರ ತಕರಾರರು ತೆಗೆದಿದೆ ಎಂದು ಕೊಡಗು-ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತರಿ (ಮನೆರಗಾ) ಯೋಜನೆಗೆ ಹೋಲಿಸಿದರೆ ವಿಜಿ ಜಿ ರಾಮ್ ಜಿ ಒಳ್ಳೆಯ ಯೋಜನೆಯಾಗಿದೆ. ಒಳ್ಳೆಯ ಉದ್ದೇಶದಿಂದ ಮನೆರಗಾ ಆರಂಭವಾದರೂ ಅದರಲ್ಲಿ ಸಾಕಷ್ಟು ದುರುಪಯೋಗಕ್ಕೆ ಅವಕಾಶಗಳಿದ್ದವು. ಹಾಗಾಗಿ ಆ ಯೋಜನೆ ಫಲಪ್ರದ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ವಿಕಸಿತ ಭಾರತದ ಗುರಿ ಇಟ್ಟುಕೊಂಡು ವಿಜಿ ಜಿ ರಾಮ್ ಜಿ ರೂಪಿಸಲಾಗಿದೆ. ಇಲ್ಲಿ ಯಾವುದೇ ರೀತಿಯ ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಮೂಹಿಕ ಜವಾಬ್ದಾರಿ ನಿರ್ವಹಿಸುವ ಗುರಿ ಇಟ್ಟುಕೊಂಡು ರೂಪಿಸಲಾಗಿರುವ ಈ ಯೋಜನೆಗೆ ಉಳಿದೆಲ್ಲಾ ರಾಜ್ಯಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರೂ ಕರ್ನಾಟಕ ಮಾತ್ರ ತಕರಾರು ತೆಗೆದಿದೆ. ಯೋಜನೆ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಜಾರಿಯಾಗುವುದನ್ನು ಸಹಿಸದೇ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಕಸಿತ ಭಾರತವನ್ನು ಗುರಿಯಾಗಿ ಇರಿಸಿಕೊಂಡಿರುವುದರಿAದ ಇದಕ್ಕೆ ಪೂರಕವಾಗಿ ಯೋಜನೆಗೆ ಹೆಸರು ಇಡಲಾಗಿದೆ. ಇದರಲ್ಲಿ ಯಾವುದೇ ವ್ಯಕ್ತಿಯ ಹೆಸರು ಇಲ್ಲ. ಯೋಜನೆಗಳಿಗೆ ವ್ಯಕ್ತಿಗಳ ಹೆಸರು ಇಡದಿರುವ ಮೇಲ್ಪಂಕ್ತಿಯನ್ನು ವಾಜಪೇಯಿ ಅವರು ಹಾಕಿಕೊಟ್ಟಿದ್ದು, ಅದೇ ದಾರಿಯಲ್ಲಿ ಬಿಜೆಪಿ ನಡೆಯುತ್ತಿದೆ. ಈ ಯೋಜನೆಯ ಫಲಾನುಭವಿ ಆಯಾಯಾ ರಾಜ್ಯಗಳೇ ಆಗಿರುವುದರಿಂದ ಊಹಾಪೋಹಗಳನ್ನು ಹರಿಯಬಿಡುವುದನ್ನು ಬಿಟ್ಟು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಜನಪರ ಕಾಳಜಿ ಇರುವ ಯಾವುದೇ ಸರ್ಕಾರವಾದರೂ ವಿಜಿ ಜಿ ರಾಮ್ ಜಿಯನ್ನು ಅನುಷ್ಠಾನಕ್ಕೆ ತರುತ್ತದೆ.
ಮನೆರಗಾದಲ್ಲಿ ಇದ್ದ 100 ದಿನಗಳ ಕೆಲಸದ ದಿನಗಳನ್ನು ವಿಜಿ ಜಿ ರಾಮ್ ಜಿಯಲ್ಲಿ 125 ದಿನಗಳಿಗೆ ಏರಿಸಲಾಗಿದೆ. 266 ಕಾಮಗಾರಿಗಳನ್ನು ಈ ಯೋಜನೆ ಅಡಿಯಲ್ಲಿ ತರಲು ಉದ್ದೇಶಿಸಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಆಯಾಯ ರಾಜ್ಯ ಸರ್ಕಾರಗಳೇ ಕೆಲಸದ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಮಲೆನಾಡಿಗೆ ಅನುಕೂಲ ಆಗುವ ಕಾಮಗಾರಿಗಳಿಗೂ ಈ ಯೋಜನೆ ಬಳಸಿಕೊಳ್ಳಬಹುದು. ಮೊದಲಿನಂತೆ ಯೋಜನೆ ದುರುಪಯೋಗ, ಕೆಲಸ ಕದಿಯಲು ಇಲ್ಲಿ ಅವಕಾಶ ಇಲ್ಲ. ಕೆರೆ ಹೂಳೆತ್ತಲು ಮಾತ್ರವಲ್ಲದೆ ಕೆರೆಯ ಸಮಗ್ರ ಅಭಿವೃದ್ಧಿಗೆ ಇಲ್ಲಿ ಅವಕಾಶ ಇದೆ.
ಯೋಜನೆಯ ಶೇ.60 ಪಾಲು ಕೇಂದ್ರ ಸರ್ಕಾರ ಭರಿಸಿದರೆ, ಶೇ. 40ರಷ್ಟು ಪಾಲನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಈ ಮೂಲಕ ರಾಜ್ಯ ಸರ್ಕಾರಗಳ ಭಾಗಿದಾರತ್ವಕ್ಕೂ ಅವಕಾಶ ಕಲ್ಪಿಸಲಾಗಿದೆ. 3 ವರ್ಷಕ್ಕೊಮ್ಮೆ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು. ರೈತರಿಗೆ ಆಸ್ತಿ ಸೃಷ್ಟಿ ಆಗುವಂಥ ಯೋಜನೆಗಳಿಗೆ ಆದ್ಯತೆ ಕೊಡಲಾಗಿದೆ. ಯಾವುದೇ ಸೋರಿಕೆ ಇಲ್ಲದ ಯೋಜನೆ ಇದಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್ ಕುಮಾರ್, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಹ್ಮಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net