ಮೌಲನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ವಿರೋಧ

ಕುಶಾಲನಗರ ಪುರಸಭಾ ವ್ಯಾಪ್ತಿಗೊಳಪಡುವ ಬೈಚನಹಳ್ಳಿಯ ಆರ್.ಸಿ. ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ತೆರೆಯಲು ಯೋಜಿಸಿರುವ ಮೌಲನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬಡಾವಣೆಗಳ ನಿವಾಸಿಗಳು ವಿರೋಧಿಸಿ ಪ್ರತಿಭಟಿಸಿದರು. ಕಣಿವೆ ನಾಗೇಂದ್ರ, ರಾಣಿ, ಕಮಲ್, ನಾಗರಾಜು ಮತ್ತಿತರರು ಇದ್ದರು.
ಕುಶಾಲನಗರ ಪುರಸಭಾ ವ್ಯಾಪ್ತಿಗೊಳಪಡುವ ಬೈಚನಹಳ್ಳಿಯ ಆರ್.ಸಿ. ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ತೆರೆಯಲು ಯೋಜಿಸಿರುವ ಮೌಲನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬಡಾವಣೆಗಳ ನಿವಾಸಿಗಳು ವಿರೋಧಿಸಿ ಪ್ರತಿಭಟಿಸಿದರು. ಕಣಿವೆ ನಾಗೇಂದ್ರ, ರಾಣಿ, ಕಮಲ್, ನಾಗರಾಜು ಮತ್ತಿತರರು ಇದ್ದರು.
Published on
ಕುಶಾಲನಗರ
ಕುಶಾಲನಗರ ಪುರಸಭಾ ವ್ಯಾಪ್ತಿಗೊಳಪಡುವ ಬೈಚನಹಳ್ಳಿಯ ಆರ್.ಸಿ. ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ತೆರೆಯಲು ಯೋಜಿಸಿರುವ ಮೌಲನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬಡಾವಣೆಗಳ ನಿವಾಸಿಗಳು ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ಬಡಾವಣೆಯ ನಿವಾಸಿಗಳು ಶ್ರಮದಾನ ಮಾಡುವ ಮೂಲಕ ಹಾಗೂ ಮನೆ ಮನೆಗಳಲ್ಲಿ ಹಣ ಸಂಗ್ರಹಿಸಿ ಸಮತಟ್ಟು ಹಾಗೂ ಸ್ವಚ್ಛವಾಗಿಟ್ಟುಕೊಂಡಿರುವ ವಿಶಾಲ ಉದ್ಯಾನದ ಜಾಗದ 45 ಸೆಂಟು ಜಾಗದಲ್ಲಿ ಶಾಲೆ ತೆರೆಯ ಹೊರಟಿರುವುದು ಅವೈಜ್ಞಾನಿಕವಾಗಿದೆ. ಸರ್ಕಾರದ ವತಿಯಿಂದ ನಿರ್ಮಾಣವಾಗುವ ಹೊಸ ಶಾಲಾ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಅಟದ ಮೈದಾನ, ವಾಹನಗಳ ಪಾರ್ಕಿಂಗ್, ವಿಶಾಲವಾದ ರಸ್ತೆ ಹೀಗೆ ಮೂಲ ಸೌಕರ್ಯಗಳು ಇರಬೇಕು. ಆದರೆ ಕಿಷ್ಕಿಂದೆಯAತಿರುವ ಜಾಗದಲ್ಲಿ ಕೊಡಗು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಾಲೆ ತೆರೆಯಲು ಯೋಜಿಸಿರುವುದು ಸಮಂಜಸವಲ್ಲ ಎಂದು ಬಡಾವಣೆ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕಣಿವೆ ನಾಗೇಂದ್ರ ಈ ಸಂದರ್ಭ ಹೇಳಿದರು.
ಬಡಾವಣೆಯ ನಿವಾಸಿಗಳು ಈಗಾಗಲೇ ಒಂದೆಡೆ ಸೇರಿ ಸಭೆ ನಡೆಸಿ ಇಲಾಖೆಯ ಕ್ರಮವನ್ನು ಖಂಡಿಸಿ ಸಂಸದರು, ಶಾಸಕರು ಹಾಗೂ ತಾಲೂಕು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷೆ ರಾಣಿ ಮಾಹಿತಿ ನೀಡಿದ್ದಾರೆ.
ಸಮಿತಿ ಕಾರ್ಯದರ್ಶಿ ಕಮಲ್ ಮಾತನಾಡಿ ದೇಶದ ಗಡಿಗಳಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿ ನಿವೃತ್ತಿಯಾಗಿ ಬಂದಿರುವ ಅನೇಕ ಮಂದಿ ಮಾಜಿ ಸೈನಿಕರು ಇಲ್ಲಿ ಮನೆಗಳನ್ನು ನಿರ್ಮಿಸಿ ಶಾಂತಿ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಜತೆಗೆ ಬಡಾವಣೆಯಲ್ಲಿ ವಯೋವೃದ್ದರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರೆಲ್ಲರ ನೆಮ್ಮದಿಗೆ ಭಂಗವಾಗದ ರೀತಿಯಲ್ಲಿ ಉದ್ದೇಶಿತ ಶಾಲೆಯ ಕಟ್ಟಡ ಕಾಮಗಾರಿಯನ್ನು ಕೂಡಲೇ ಬೇರೆ ಜಾಗದಲ್ಲಿ ಆರಂಭಿಸಲಿ ಎಂದು ಒತ್ತಾಯಿಸಿದರು.
ಸಮಿತಿ ಖಜಾಂಚಿ ನಾಗರಾಜು ಮಾತನಾಡಿ ಒಂದು ವೇಳೆ ಇಲಾಖೆ ಅಧಿಕಾರಿಗಳು ಹಟಮಾರಿ ಧೋರಣೆ ಅನುಸರಿಸಿದಲ್ಲಿ ಒಗ್ಗಟ್ಟಿನ ಉಗ್ರ ಸ್ವರೂಪದ ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಬಡಾವಣೆಯ ಪ್ರಮುಖರಾದ ವಕೀಲ ಜಗದೀಶ್, ಇಂಜಿನಿಯರ್ ಸಂದೀಪ್, ಚೈತ್ರಾ, ಪುಷ್ಪ, ಮಂಜು, ನಾಗಮಣಿ, ಸುರೇಖಾ, ಶ್ಯಾಮಲಾ ಮೊದಲಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net