ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಂಯಮವನ್ನು ಕಲಿಸುವುದರ ಜೊತೆಗೆ ಸೇವಾ ಮನೋಭಾವವನ್ನು ವೃದ್ಧಿಸುತ್ತದೆ. ಧೈರ್ಯ, ಸಾಹಸ, ನಿಷ್ಠೆ, ಪ್ರಾಮಾಣಿಕತೆ, ದೇಶಪ್ರೇಮವನ್ನು ಬೆಳೆಸುತ್ತದೆ. ಪರಿಶ್ರಮದಿಂದ ಗುರಿ ಸಾಧಿಸುವ ಚಾರಣವು ಜೀವನದ ಪಾಠವನ್ನು ಹೇಳುತ್ತದೆ. ಸಾಧನೆಗೆ ದೃಢ ನಿರ್ಧಾರ ಅಗತ್ಯ, ಚಾರಣ ಮಾಡುವ ಸಂದರ್ಭ ದೇಹಕ್ಕೆ ಆಯಾಸವಾಗಬಹುದು. ಆದರೆ ಸುತ್ತಮುತ್ತಲ ಹಸಿರ ಪರಿಸರ, ಬೆಟ್ಟಗುಡ್ಡ, ಮರಗಿಡಗಳು, ಸುಂದರವಾದ ಹೂವುಗಳು ಮತ್ತು ಪಕ್ಷಿಗಳನ್ನು ಕಂಡಾಗ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ಸಹಪಾಠಿಗಳೊಂದಿಗೆ ಬೆಟ್ಟದ ತುದಿಗೇರಿದಾಗ ಆಗುವ ಅದ್ಭುತ ಅನುಭವ ಹಾಗೂ ಸಂತೋಷವೇ ಬೇರೆ ಎಂದು ತಿಳಿಸಿದರು.