ಶನಿವಾರಸಂತೆ: ಶನಿವಾರಸಂತೆ ವ್ಯಾಪ್ತಿಯಲ್ಲಿ ಕೇರಳಂ ಮೂಲದ ಮಲಯಾಳಿ ಭಾಷಿಕರು ಬುಧವಾರ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗೋಪಾಲಪುರ, ಒಡೆಯನಪುರ, ಮುಳ್ಳೂರು, ಜಾಗೇನಹಳ್ಳಿ, ನಿಡ್ತ, ಮಾಲಂಬಿ, ಕಣಿವೆಬಸವನಹಳ್ಳಿ, ಆಲೂರುಸಿದ್ದಾಪುರ, ಹೊಸಗುತ್ತಿ ಮುಂತಾದ ಗ್ರಾಮಗಳಲ್ಲಿ ಹಬ್ಬವನ್ನು ಆಚರಿಸಲಾಯಿತು.
ತಮ್ಮ ಮನೆಗಳಲ್ಲಿ ಮನೆಮಂದಿ ಸೇರಿದಂತೆ ಅಕ್ಕಪಕ್ಕದವರನ್ನು ಕರೆದು ಸಡಗರದ ಹಬ್ಬದ ಭೋಜನ ಸವಿದರು.