ಸರ್ವಜ್ಞ ಬರೆದಿರುವ ತ್ರಿಪದಿ ಪದ್ಯಗಳು ಸಾರ್ವಕಾಲಿಕವಾಗಿದ್ದು, ಇಂಗ್ಲೀಷ್, ಹಿಂದಿ ಸೇರಿದಂತೆ ರಾಷ್ಟçದ ಎಲ್ಲಾ ಭಾಷೆಗಳಿಗೂ ಭಾಷಾಂತರಿಸಿದಲ್ಲಿ ಪ್ರತಿಯೊಬ್ಬರಿಗೂ ತಲುಪಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ತ್ರಿಪದಿಗಳ ಬ್ರಹ್ಮ, ಚಕ್ರವರ್ತಿ ಎಂಬ ಬಿರುದು ಪಡೆದಿರುವ ಸರ್ವಜ್ಞ ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತಾವಾದಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಮೂರು ಸಾಲಿನಲ್ಲಿ ಪದ್ಯಗಳನ್ನು ರಚಿಸುವ ಮೂಲಕ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬರೆದಿರುವುದು ಶ್ಲಾಘನೀಯ. ಸಾಮಾಜಿಕ ವಿಮರ್ಶೆ, ಜೀವನಾನುಭವ, ಬದುಕಿನ ಸತ್ಯಗಳನ್ನು ಸರಳವಾಗಿ ತ್ರಿಪದಿಗಳ ಮೂಲಕ ಸರ್ವಜ್ಞ ವಿವರಿಸಿದ್ದಾರೆ. ಸಮಾಜದಲ್ಲಿನ ಅಂಕುಡೊAಕುಗಳನ್ನು ತ್ರಿಪದಿಗಳ ಮೂಲಕ ಬರೆದು ಸ್ವಸ್ಥö ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ತ್ರಿಪದಿಗಳಲ್ಲಿ ವ್ಯಂಗ್ಯ, ವಿಡಂಬನೆ, ವಿಮರ್ಶೆ ಕಾಣಬಹುದಾಗಿದೆ. ಸರ್ವಜ್ಞ ತ್ರಿಪದಿಗಳಲ್ಲಿ ಸತ್ಯ, ಧರ್ಮ ಹಾಗೂ ನ್ಯಾಯನಿಷ್ಠೆ ಕಾಣಬಹುದಾಗಿದೆ. ಮೂರು ಸಾಲಿನ ತ್ರಿಪದಿಗಳು ಮೂರು ಪುಟಗಳಷ್ಟು ವಿವರವನ್ನು ನೀಡಬಹುದಾಗಿದೆ. ಅಂತಹ ಚಿಂತನೆಯನ್ನು ತ್ರಿಪದಿಗಳಲ್ಲಿ ವರ್ಣಿಸಲಾಗಿದೆ. ಸರ್ವಜ್ಞನ ತ್ರಿಪದಿಗಳು ಪ್ರಸ್ತುತ ಸಮಾಜಕ್ಕೆ ದಿವ್ಯ ಔಷಧಿಯಾಗಿದೆ. ಆತ್ಮವಿಮರ್ಶೆ, ಸಾಮಾಜಿಕ ಚಿಂತನೆ, ಸಮಾಜ ಸುಧಾರಣೆಯತ್ತ ತ್ರಿಪದಿಗಳು ಬೆಳಕನ್ನು ಚೆಲ್ಲುತ್ತವೆ. ಕವಿ ಸರ್ವಜ್ಞ ಅವರು ದಾರ್ಶನಿಕ, ತತ್ವಜ್ಞಾನಿ, ವಾಸ್ತವವಾಗಿ ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.