ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಮೈದಾನ ಸ್ವಚ್ಛತೆ

 ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನ ಸ್ವಚ್ಛತೆ ವೇಳೆ ಲಯನ್ಸ್ ಅಧ್ಯಕ್ಷ ಕೇಶವಮೂರ್ತಿ, ಚಿಣ್ಣಪ್ಪ ,ಹರೀಶ್, ಧರ್ಮಪ್ಪ, ಶಿವಕುಮಾರ್, ಪೊನ್ನಪ್ಪ, ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನ ಸ್ವಚ್ಛತೆ ವೇಳೆ ಲಯನ್ಸ್ ಅಧ್ಯಕ್ಷ ಕೇಶವಮೂರ್ತಿ, ಚಿಣ್ಣಪ್ಪ ,ಹರೀಶ್, ಧರ್ಮಪ್ಪ, ಶಿವಕುಮಾರ್, ಪೊನ್ನಪ್ಪ, ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Published on
ಶನಿವಾರಸಂತೆ: ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ಶಿಬಿರದಲ್ಲಿ ಶಾಲಾ ಮೈದಾನವನ್ನು ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸ್ವಚ್ಛಗೊಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವಮೂರ್ತಿ, ಖಜಾಂಚಿ ಬಿ.ಕೆ.ಚಿಣ್ಣಪ್ಪ, ಉಪಾಧ್ಯಕ್ಷ ಧರ್ಮಪ್ಪ, ನಿಕಟಪೂರ್ವ ಅಧ್ಯಕ್ಷ ಬಿ.ಸಿ.ಧರ್ಮಪ್ಪ, ಸದಸ್ಯರಾದ ಶಿವಕುಮಾರ್, ಎಸ್.ಜೆ.ಅಶೋಕ್, ಸಿ.ಎಂ.ಸುಹಾನ್, ಶಿಬಿರಾಧಿಕಾರಿ ಹರೀಶ್ ಮಾಗಲು, ಬಿ.ಎಂ.ಪೊನ್ನಪ್ಪ ಹಾಗೂ ಶಿಬಿರಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net