ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಗಮನನೀಡಿ

ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಕಾರುಗುಂದ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಉದ್ಘಾಟಿಸಿದರು. ಅಂಬೆಕಲ್ಲು ಪ್ರಿಯಾ ನವೀನ್, ಕೊಡಪಾಲು ಗಣಪತಿ, ಕಡ್ಲೇರ ತುಳಸಿ ಮೋಹನ್ ಇತರರು ಇದ್ದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಕಾರುಗುಂದ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಉದ್ಘಾಟಿಸಿದರು. ಅಂಬೆಕಲ್ಲು ಪ್ರಿಯಾ ನವೀನ್, ಕೊಡಪಾಲು ಗಣಪತಿ, ಕಡ್ಲೇರ ತುಳಸಿ ಮೋಹನ್ ಇತರರು ಇದ್ದರು.
Published on
ನಾಪೋಕ್ಲು: ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ಸರ್ಕಾರದೊಂದಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ವಕೀಲರಾದ ಅಂಬೆಕಲ್ಲು ಪ್ರಿಯಾ ನವೀನ್ ಹೇಳಿದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಮಗುವಿಗೆ ದೊರೆತ ಶಿಕ್ಷಣದಿಂದ ಒಂದು ಕುಟುಂಬದ ಪ್ರಗತಿ ಮತ್ತು ದೇಶದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮಗುವೂ ಶಾಲೆಗೆ ಹೋಗುವಂತೆ ಆಗಬೇಕು ಎಂದರು. ಬಾಲ ಕಾರ್ಮಿಕರನ್ನು ಅಮಾನುಷವಾಗಿ ದುಡಿಸಿಕೊಳ್ಳುವುದು ಕಂಡು ಬಂದಲ್ಲಿ ಕಂದಾಯ, ಪೊಲೀಸ್ ಅಥವಾ ಆರೋಗ್ಯ ಇಲಾಖೆಗೆ ದೂರು ನೀಡಬೇಕು ಎಂದು ಅವರು ಸಲಹೆ ನೀಡಿದರು. ಸಾರ್ವಜನಿಕರೂ ಸಹಕಾರ ನೀಡಿದರೆ ಬಾಲಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸಲು ಸಾಧ್ಯ. ಇಲಾಖೆಗಳು ನಡೆಸುವ ಕಾರ್ಯಕ್ರಮಗಳಿಗೆ ಮಹಿಳಾ ಒಕ್ಕೂಟ ಬೆಂಬಲಿಸಿರುವುದು ಶ್ಲಾಘನೀಯ ಎಂದು ಅವರು ನುಡಿದರು.
ಕಾರುಗುಂದ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಸರ್ಕಾರ ಕಿಶೋರ ಕಾರ್ಮಿಕರೆಂದು ಗುರುತಿಸಿದೆ. ಅವರನ್ನು ಜೀತ ಪದ್ಧತಿಗೆ ಅಳವಡಿಸುವುದು ಅಪರಾಧ. ಈ ನಿಟ್ಟಿನಲ್ಲಿ ಉದ್ದಿಮೆದಾರರು ಎಚ್ಚರ ವಹಿಸಬೇಕು ಎಂದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಪ್ರೀತಿ, ಪೋಷಣೆ ಹಾಗೂ ವಿದ್ಯಾಭ್ಯಾಸ ನೀಡುವುದು ಪಾಲಕರ ಜವಾಬ್ದಾರಿ. ಆದರೆ ಪಾಲಕರೊಂದಿಗೆ ಸರಿಸಮಾನವಾಗಿ ಮಕ್ಕಳನ್ನೂ ದುಡಿಸಿಕೊಳ್ಳುವುದು ಮತ್ತು ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಅಪರಾಧ ಎಂದರು. ವಲಸೆ ಕಾರ್ಮಿಕರೊಂದಿಗೆ ಬರುವ ಮಕ್ಕಳಿಗೆ ಸಂಜೆ ಸಮಯದಲ್ಲಿ ಸಂಘ ಸಂಸ್ಥೆಗಳು ಅಕ್ಷರ ಕಲಿಸಿ ಅವರಲ್ಲೂ ಜ್ಞಾನವೃದ್ಧಿಯಾಗಲು ಆಸಕ್ತಿ ತೋರಬೇಕು. ವಿದ್ಯೆ ಕಲಿತ ಮಗು ದೇಶದ ಉತ್ತಮ ಪ್ರಜೆಯಾಗಬೇಕು ಎಂದರು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳು ಮಕ್ಕಳ ಸಮಗ್ರ ವಿಕಸನಕ್ಕೆ ದೊಡ್ಡ ಅಡಚಣೆ.
ಇದನ್ನು ತಡೆಯಲು ಗೌಡ ಮಹಿಳಾ ಒಕ್ಕೂಟ ಸಹಕರಿಸಲಿದೆ ಎಂದರು. ಕಾರುಗುಂದ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ , ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ , ಕೂರನ ಸುಶೀಲಾ ಅಪ್ಪಾಜಿ, ನಿವೃತ್ತ ಶಿಕ್ಷಕಿ ಅಣ್ಣಚಿರ ಬೋಜಮ್ಮ , ಬೈಮನ ಜ್ಯೋತಿ ತಿಮ್ಮಯ್ಯ, ಕಡ್ಯದ ಸ್ಮಿತಾ ಜೀವನ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net