ಗುರುವಾರದ (ಸೆ.17) ಮಾಹಿತಿ ಪ್ರಕಾರ ಈಗಾಗಲೇ 58,093 ನೊಟೀಸ್‌ಗಳನ್ನು ಮತದಾರರಿಗೆ ತಲುಪಿಸಲಾಗಿದೆ. 26,204 ಮತದಾರರ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು 18,785 ನೊಟೀಸ್‌ಗಳ ಪೈಕಿ 18,264 ನೊಟೀಸ್ ಸಂಬAಧಿಸಿದವರಿಗೆ ತಲುಪಿಸಲಾಗಿದ್ದು, 7,431 ವಿಚಾರಣೆಗಳು ಪೂರ್ಣಗೊಂಡಿವೆ. ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 40,108 ನೊಟೀಸ್‌ಗಳ ಪೈಕಿ 39,829 ನೊಟೀಸ್ ನೀಡಲಾಗಿದ್ದು, 18,773 ವಿಚಾರಣೆ ಮುಕ್ತಾಯಗೊಂಡಿದೆ.