ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತ ಚುನಾವಣೆಗೆ ನಾಮಪತ್ರ

ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕರ ಸ್ಧಾನಕ್ಕೆ ನಡೆಯುವ ಚುನಾವಣೆಗೆ ಎಸ್. ಆರ್ ಅರುಣ್ ರಾವ್ ನಾಮಪತ್ರ ಸಲ್ಲಿಸಿದರು. ಬಿ. ಕಾವೇರ, ಮಿಟ್ಟು ಮತ್ತಿತರರು ಈ ಸಂದರ್ಭ ಇದ್ದರು.
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕರ ಸ್ಧಾನಕ್ಕೆ ನಡೆಯುವ ಚುನಾವಣೆಗೆ ಎಸ್. ಆರ್ ಅರುಣ್ ರಾವ್ ನಾಮಪತ್ರ ಸಲ್ಲಿಸಿದರು. ಬಿ. ಕಾವೇರ, ಮಿಟ್ಟು ಮತ್ತಿತರರು ಈ ಸಂದರ್ಭ ಇದ್ದರು.
Published on
ಮಡಿಕೇರಿ:
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತದ ಆಡಳಿತ ಮಂಡಳಿಯ 2026-31ರ ಅವಧಿಗೆ ನಿರ್ದೇಶಕರ ಸ್ಧಾನಕ್ಕೆ ಕುಶಾಲನಗರ ತಾಲೂಕು ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಎಸ್. ಆರ್ ಅರುಣ್ ರಾವ್ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಕೊಡಗು ಜಿಲ್ಲೆಯ ಪರವಾಗಿ ಒಂದು ನಿರ್ದೇಶಕರ ಸ್ಧಾನಕ್ಕೆ ಸ್ಪರ್ಧಿಸಲು ಕೊಡಗು ಜಿಲ್ಲೆಯಿಂದ ಮಹಾಮಂಡಳದ ಸದ್ಯಸತ್ವ ಪಡೆದವರಿಗೆ ಅವಕಾಶ ಕಲ್ಪಿಸಲಾಗಿದ್ದು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತಕ್ಕೆ ರಾಜ್ಯ ಎಂಟು ಜಿಲ್ಲೆಗಳು ಒಳಪಟ್ಟಿವೆ. ಇವುಗಳಲ್ಲಿ ಮತದಾನ ಮಾಡುವ ಹಕ್ಕನ್ನು ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ಒಟ್ಟು ಎಂಟು ಜಿಲ್ಲೆಯ 13ಸದಸ್ಯರು ಪಡೆದಿದ್ದು ಏ. 12ಕ್ಕೆ ಚುನಾವಣೆ ನಡೆಯಲಿದೆ.
ಕೊಡಗು ಜಿಲ್ಲೆಯಲ್ಲಿ ಮತದಾನ ಹಕ್ಕನ್ನು 3 ಸಹಕಾರ ಸಂಘದ ಪ್ರತಿನಿಧಿಗಳು ಪಡೆದಿದ್ದಾರೆ.
ಅರುಣ್ ರಾವ್ ನಾಮಪತ್ರ ಸಲ್ಲಿಕೆ ಸಂದರ್ಭ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನಿಯಮಿತದ ಅಧ್ಯಕ್ಷ ಬಿ. ಕಾವೇರ, ಮಿಟ್ಟು ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net