ಮಾನವ-ವನ್ಯಜೀವಿ ಸಂಘರ್ಷದಿAದ ಮನುಷ್ಯರಿಗೆ ಮಾತ್ರ ನಷ್ಟ ಆಗುತ್ತಿಲ್ಲ. ಅಮೂಲ್ಯ ಪ್ರಾಣಿ ಸಂಪತ್ತು ಕೂಡ ನಾಶ ಆಗುತ್ತಿರುವುದು ಪ್ರಜ್ಞಾವಂತರನ್ನು ಚಿಂತಿಸುವAತೆ ಮಾಡಿದೆ. ಮಡಿಕೇರಿ, ವಿರಾಜಪೇಟೆ ಹಾಗೂ ನಾಗರಹೊಳೆ ವಿಭಾಗ ಒಳಗೊಂಡು ಕೊಡಗು ಅರಣ್ಯ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ಅಂದಾಜು 40ಕ್ಕೂ ಅಧಿಕ ಕಾಡಾನೆಗಳು ಸಾವನ್ನಪ್ಪಿವೆ. ಅಕ್ರಮ ವಿದ್ಯುತ್ ಬೇಲಿ, ಸೋಲಾರ್ ಬೇಲಿ ದೋಷ, ವಯೋಸಹಜ, ಅನಾರೋಗ್ಯ ಹಾಗೂ ಆನೆಗಳ ನಡುವಿನ ಕಾಳಗ, ರೈಲ್ವೇ ಬ್ಯಾರಿಕೇಡ್‌ಗೆ ಸಿಲುಕಿ, ಗುಂಡಿಗೆ ಬಿದ್ದು, ಆನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಉಂಟಾದ ಆಘಾತಗಳು ಹೀಗೆ ಅನೇಕ ಕಾರಣಗಳಿಂದ ಕಾಡಾನೆಗಳು ಮೃತಪಟ್ಟಿರುವುದು ವರದಿಯಾಗಿದೆ. 2019-20 ರಿಂದ 2024-25ರ ಕಳೆದ 5 ವರ್ಷಗಳ ಅವಧಿಯಲ್ಲಿ ಕೊಡಗಿನಲ್ಲಿ ಕಾಡಾನೆ ದಾಳಿಯಿಂದ 44ಕ್ಕೂ ಹೆಚ್ಚು ಮನುಷ್ಯರು ಪ್ರಾಣ ಕಳೆದುಕೊಂಡಿದ್ದಾರೆ. ನಾಗರಹೊಳೆ ಮತ್ತು ಮಡಿಕೇರಿ ಅರಣ್ಯ ವಿಭಾಗಗಳಲ್ಲಿ ಕಳೆದ 5 ವರ್ಷಗಳಲ್ಲಿ 15ಕ್ಕೂ ಹೆಚ್ಚು ಹುಲಿಗಳ ಸಾವು ದಾಖಲಾಗಿದೆ. ಸರಹದ್ದು ಗುರುತಿಸಲು ನಡೆಯುವ ಕಾದಾಟ, ಹುಲಿಗಳ ನಡುವೆ ನಡೆಯುವ ಪರಸ್ಪರ ಕಾದಾಟ, ವಯೋಸಹಜ ಸಾವು ಹಾಗೂ ಅನಾರೋಗ್ಯ, ಅನುಮಾನಾಸ್ಪದ ವಿಷಪ್ರಾಶನ, ಉರುಳುಗಳಲ್ಲಿ ಸಿಲುಕಿ, ಗುಂಡೇಟಿನ ಗಾಯದಿಂದ ಹುಲಿಗಳು ಮೃತಪಟ್ಟಿರುವ ಪ್ರಕರಣಗಳು ನಡೆದಿವೆ. ಪೊನ್ನಂಪೇಟೆ, ಶ್ರೀಮಂಗಲ, ತಿತಿಮತಿ ಒಳಗೊಂಡು ದಕ್ಷಿಣ ಕೊಡಗು ಭಾಗದಲ್ಲಿ ಈಚಿನ ವರ್ಷಗಳಲ್ಲಿ ಹುಲಿ ದಾಳಿಯಿಂದ 8ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಸು, ಮೇಕೆ ಸೇರಿ ನೂರಾರು ಸಾಕುಪ್ರಾಣಿಗಳು ಬಲಿಯಾಗಿವೆ.