ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾದ ಅಬ್ಬಿಫಾಲ್ಸ್ನಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ನಿರ್ಲಕ್ಷö್ಯ ವಹಿಸಿರುವ ಆರೋಪ ಕೇಳಿಬಂದಿದೆ. ಅಬ್ಬಿಫಾಲ್ಸ್ ಭದ್ರತಾ ಸಿಬ್ಬಂದಿ ಕೊಠಡಿ ಮೇಲಿರುವ ವೀಕ್ಷಣಾ ಗೋಪುರ ಅಪಾಯವನ್ನು ಆಹ್ವಾನಿಸುವಂತಿದೆ. ವೀಕ್ಷಣಾ ಗೋಪುರದ ಕಬ್ಬಿಣದ ತಡೆಬೇಲಿ ಸಂಪೂರ್ಣ ತುಕ್ಕು ಹಿಡಿದಿದ್ದು ಯಾವ ಕ್ಷಣದಲ್ಲಾದರೂ ಕಿತ್ತುಬೀಳುವ ಸ್ಥಿತಿಯಲ್ಲಿ ಇದೆ. ವೀಕ್ಷಣಾ ಗೋಪುರದ ಮೇಲೇರುವ ಪ್ರವಾಸಿಗರು ಈ ಕಬ್ಬಿಣದ ತಡೆಬೇಲಿಗೆ ಒರಗಿ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದ್ದು, ಈ ವೇಳೆ ಬೇಲಿ ಕಿತ್ತುಬಂದರೆ ಜಲಪಾತದೊಳಗೆ ಬಿದ್ದು ಅನಾಹುತ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.