ಹಿಂದೂ ಧರ್ಮದ ನಾಶ ಯಾರಿಂದಲೂ ಸಾಧ್ಯವಿಲ್ಲ

ವಿರಾಜಪೇಟೆಯಲ್ಲಿ ಆಯೋಜನೆ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರವೀಣ್ ಸರಳ ಮಾತನಾಡಿದರು. ಅಂಜಪರವಂಡ ಅನೀಲ್ ಮಂದಣ್ಣ , ಪಟ್ಟಡ ರೀನಾ ಪ್ರಕಾಶ್, ಅಜಯ್ ರಾವ್, ಪ್ರದೀಪ್ ರೈ, ಕೂತಂಡ ಸಚಿನ್, ಸುರೇಶ್ ಚಾಮಿ, ಸಹ ಸಂಚಾಲಕ ಹೇಮಂತ್, ಅಮ್ಮಣಿ ಚಂಡ ರಂಜನ್ ನಂಜಪ್ಪ, ಸಹ ಖಜಾಂಚಿ ವಿನೋದ್, ಕೋಶಾಧ್ಯಕ್ಷ ದುಶ್ಯಂತ್ ರಾವ್ ಇದ್ದರು.
ವಿರಾಜಪೇಟೆಯಲ್ಲಿ ಆಯೋಜನೆ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರವೀಣ್ ಸರಳ ಮಾತನಾಡಿದರು. ಅಂಜಪರವಂಡ ಅನೀಲ್ ಮಂದಣ್ಣ , ಪಟ್ಟಡ ರೀನಾ ಪ್ರಕಾಶ್, ಅಜಯ್ ರಾವ್, ಪ್ರದೀಪ್ ರೈ, ಕೂತಂಡ ಸಚಿನ್, ಸುರೇಶ್ ಚಾಮಿ, ಸಹ ಸಂಚಾಲಕ ಹೇಮಂತ್, ಅಮ್ಮಣಿ ಚಂಡ ರಂಜನ್ ನಂಜಪ್ಪ, ಸಹ ಖಜಾಂಚಿ ವಿನೋದ್, ಕೋಶಾಧ್ಯಕ್ಷ ದುಶ್ಯಂತ್ ರಾವ್ ಇದ್ದರು.
Published on
ವಿರಾಜಪೇಟೆ: ಸನಾತನ ಪರಂಪರೆ ಇರುವ ಹಿಂದೂ ಧರ್ಮವನ್ನು ನಾಶ ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋ ಸೇವಾ ಪ್ರಮುಖ್ ಪ್ರವೀಣ್ ಸರಳ ಹೇಳಿದರು.
ವಿರಾಜಪೇಟೆ ತಾಲೂಕು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಹಿಂದೂ ಸಂಗಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶದ ಸಂಸ್ಕೃತಿ ಮೇಲೆ ಹಲವು ಬಾರಿ ಪರಕೀಯರು ದಾಳಿ ನಡೆಸಿದರೂ ಈ ಧರ್ಮವನ್ನು ಎಂದಿಗೂ ನಾಶ ಮಾಡಲಾಗಲಿಲ್ಲ. ನಿತ್ಯ ನೂತನವಾದ ಧರ್ಮ ನಮ್ಮದು. ಹಿಂದೂಗಳಲ್ಲಿ ಹಿಂದುತ್ವ ಹಾಗೂ ಧರ್ಮದ ಕುರಿತ ಅಜ್ಞಾನವಿದೆ. ಈ ಅಜ್ಞಾನವನ್ನು ತೊಲಗಿಸಲು ಎಲ್ಲರಲ್ಲೂ ಅಭಿಮಾನ ಬೆಳೆಸಬೇಕು. ಹಿಂದುತ್ವವನ್ನು ಬೆಳೆಸುವುದರ ಜತೆಗೆ ರಾಷ್ಟ್ರಭಕ್ತಿಯು ಕೊಡಗು ಜನರ ರಕ್ತದ ಕಣಕಣದಲ್ಲಿದೆ ಎಂದರು.
ಮೈಸೂರಿನ ಬೃಂದಾವನ ಆಸ್ಪತ್ರೆಯ ವೈದ್ಯ ಡಾ.ಮಾತಂಡ ಅಯ್ಯಪ್ಪ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನೂರು ವರ್ಷಗಳಿಂದ ಸುದೀರ್ಘವಾಗಿ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಹಿಂದೂಗಳು ಜಾಗೃತರಾಗಿ ದೇಶ ಕಟ್ಟುವ ಕೆಲಸ ಮಾಡಬೇಕು. ನಾವೆಲ್ಲರೂ ಹಿಂದುತ್ವಕ್ಕಾಗಿ ಹೋರಾಟ ನಡೆಸಬೇಕು. ಯಾರನ್ನು ವಿರೋಧಿಸುವ ಉದ್ದೇಶದಿಂದ ಹಿಂದೂ ಸಂಗಮ ಕಾರ್ಯಕ್ರಮ ನಡೆಸುತ್ತಿಲ್ಲ. ಬದಲಿಗೆ ನಮ್ಮನ್ನು ನಾವು ಜಾಗೃತಗೊಳಿಸುವುದರೊಂದಿಗೆ ಹಿಂದೂಗಳನ್ನು ಒಗ್ಗೂಡಿಸಲು ಹಾಗೂ ನಮ್ಮಲ್ಲಿರುವ ಕೀಳು ಮನಸ್ಥಿತಿಯನ್ನು ಹೋಗಲಾಡಿಸುವ ಉದ್ದೇಶದಿಂದಾಗಿ ವಿರಾಟ್ ಹಿಂದೂ ಸಂಗಮ ಆಯೋಜನೆಗೊಂಡಿದೆ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಕುಪ್ಪಂಡ ರಾಜೀವ್ ಕಾರ್ಯಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ತಾಲೂಕು ಉಪಾಧ್ಯಕ್ಷ ಚೇಂದಿರ ಬೋಪಣ್ಣ ಮಾತನಾಡಿ, ಹಿಂದುತ್ವ ಮತ್ತು ರಾಷ್ಟ್ರಭಕ್ತಿಯ ವಿಚಾರಗಳು ಮನೆಗಳಿಂದ ಆರಂಭವಾದಾಗ ಮನಗಳಲ್ಲಿ ಸುದೀರ್ಘವಾಗಿ ಉಳಿಯಲು ಸಾಧ್ಯ. ನಮ್ಮಲ್ಲಿ ಪಂಚ ಪರಿವರ್ತನೆಗಳನ್ನು ಅಳವಡಿಸಿಕೊಂಡು ಭೇದಭಾವ ಮರೆತು ನಮ್ಮಲ್ಲಿ ಸಮಾನತೆ ತರಬೇಕು. ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗದೆ ನಮ್ಮ ಆಚಾರ, ವಿಚಾರ ಸಂಸ್ಕೃತಿಯನ್ನು ಪಾಲಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕಿದೆ ಎಂದರು.
ವೇದಿಕೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಸಂಯೋಜಕಿ ಮನೆಯಪಂಡ ಕಾಂತಿ ಸತೀಶ್, ಸಂಯೋಜಕ ಅಂಜಪರವಂಡ ಅನೀಲ್ ಮಂದಣ್ಣ, ಪಟ್ಟಡ ರೀನಾ ಪ್ರಕಾಶ್, ಸಹ ಸಂಯೋಜಕ ಅಜಯ್ ರಾವ್, ಪ್ರದೀಪ್ ರೈ, ಕೂತಂಡ ಸಚಿನ್, ಸುರೇಶ್ ಚಾಮಿ, ಸಹ ಸಂಚಾಲಕ ಹೇಮಂತ್, ಖಜಾಂಚಿ ಅಮ್ಮಣಿ ಚಂಡ ರಂಜನ್ ನಂಜಪ್ಪ, ಸಹ ಖಜಾಂಚಿ ವಿನೋದ್, ಕೋಶಾಧ್ಯಕ್ಷ ದುಶ್ಯಂತ್ ರಾವ್ ಇತರರು ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ತೆಲುಗರ ಬೀದಿಯ ಮಾರಿಯಮ್ಮ ಗುಡಿಯಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಬೃಹತ್ ಶೋಭಾಯಾತ್ರೆ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net