ದೈವದ ಕಾರಣಿಕ ನೇಮೋತ್ಸವ

  ದೈವದ ಕಾರಣಿಕ ನೇಮೋತ್ಸವದ ದೃಶ್ಯ.
ದೈವದ ಕಾರಣಿಕ ನೇಮೋತ್ಸವದ ದೃಶ್ಯ.
Published on
ಸುಂಟಿಕೊಪ್ಪ : ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ, ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿಗನ 86ನೇ ನೇಮೋತ್ಸವವು ಶನಿವಾರ ಮತ್ತು ಭಾನುವಾರ ಶ್ರದ್ಧಾಭಕ್ತಿಯೊಂದಿಗೆ ಸಂಪನ್ನಗೊಂಡಿತು.
ಏ.3 ರಂದು ಬೆಳಗ್ಗೆ ಗೊನೆ ಕಡಿಯುವ ಮೂಲಕ ಧ್ವಜಾರೋಹಣವನ್ನು ನಡೆಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ಏ.9 ಗುರುವಾರ ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ ಏ. 11ರಂದು 12 ಗಂಟೆಗೆ ಆಯುಧ ಪೂಜೆ ಸಂಜೆ 5 ಗಂಟೆಗೆ ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು.
ಸಂಜೆ 6 ಗಂಟೆಯ ನಂತರ ಮಂತ್ರವಾದಿ ಗುಳಿಗನ ನೇಮ ನಡೆದು ಭಕ್ತರಲ್ಲಿ ಭಯ ಭಕ್ತಿ ಮೂಡಿಸಿತು, ರಾತ್ರಿ 8.30 ಗಂ. ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು. ರಾತ್ರಿ 12.30ಕ್ಕೆ ಆದಿ ಮಾಯೆ ತನಿ ಮಾನಿಗ ಗರಡಿ ಇಳಿಯುವುದು ಭಾನುವಾರ ಮುಂಜಾನೆ ತಾವು ನಂಬಿದ ಕಾರಣಿಕ ದೈವಗಳಿಗೆ ಹರಕೆ ಮತ್ತು ಕಾಣಿಕೆ ಅರ್ಪಿಸಿ ಭಕ್ತಪರಾವಶರಾದರು.
ಬೆಳಗ್ಗೆ 9 ಗಂಟೆಯ ಕೊರಗ ತನಿಯ ದೈವದ ಕಾರಣಿಕ ನೇಮೋತ್ಸವವು ನಡೆಯಿತು. ತಾನು ನಂಬಿದವರಿಗೆ ಇಂಬು ನೀಡುವೆ. ನನಗೆ ಮೋಸ ಮಾಡಿದರೆ ಕೆಲವೇ ದಿನದಲ್ಲಿ ತಪ್ಪಿನ ಮನವರಿಕೆ ಮಾಡಿಕೊಡುವೆ ಎಂದು ನುಡಿ ನೀಡಿದ ಕೊರಗಜ್ಜ, ತನ್ನ ಭಕ್ತರಲ್ಲಿ ತನ್ನ ಶಕ್ತಿ ಕಾರಣಿಕವನ್ನು ತೋರಿಸಿ ಭಯ ಉಂಟುಮಾಡಿತು.ನಂತರ ಗಂಧಪ್ರಸಾದ ವಿತರಿಸಲಾಯಿತು. ರಾತ್ರಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆದವು.
ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ರಾಜು, ಉಪಾಧ್ಯಕ್ಷ ಬಿ.ಎಸ್.ಆನಂದ, ಕಾರ್ಯದರ್ಶಿ ಎನ್.ಎಸ್.ನವೀನ, ಖಜಾಂಜಿ ಅಣ್ಣಿ, ಸಮಿತಿ ಪದಾಧಿಕಾರಿಗಳಾದ ಎಂ.ಪಿ.ದೇವಪ್ಪ, ಗೌತಮ್ ಶಿವಪ್ಪ, ದಿನೇಶ್, ದೇವಾಲಯದ ಪ್ರಧಾನ ಪೂಜಾರಿಗಳಾದ ಯೋಗೆಂದ್ರ, ಮಂಜು, ಸತೀಶ, ರವಿ, ಪಿ.ಕೆ.ಸುಂದರ, ಮೊಣ್ಣಪ್ಪ ಪೂಜಾರಿ ಊರಿನ ಗಣ್ಯರು, ಗ್ರಾಮಸ್ಥರು ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕುಶಾಲನಗರ, ಮೈಸೂರು, ಮಂಗಳೂರು ಸುಳ್ಯ, ಪುತ್ತೂರು, ಹಾಸನ, ಚಿಕ್ಕಮಗಳೂರು, ಸಕಲೇಶಪುರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೇಮೋತ್ಸವ ವೀಕ್ಷಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net