

ಪ್ರಮುಖ ಮುಖ್ಯಾಂಶಗಳು
ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂಬ ಅರೋಪವನ್ನು ಅನೇಕ ಜನರು ಹೇಳುತ್ತಿದ್ದಾರೆ. 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಇಗ್ಗೊಡ್ಲು, ಮೂವತ್ತೊಕ್ಲು ಗ್ರಾಮದಲ್ಲಿ ಅನೇಕರು ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ. ಅನೇಕರಿಗೆ ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ. ಇನ್ನಾದರೂ ವಿಳಂಬ ಮಾಡದೆ ಸರ್ಕಾರ ಮನೆ ಮತ್ತು ಸೌಲಭ್ಯಗಳನ್ನು ನೀಡಬೇಕು.
ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭಗಳಲ್ಲಿ ಸರ್ಕಾರದಿಂದ ಆಗುವ ಪರಿಹಾರದ ಘೋಷಣೆಗಳು ಶೇ. ನೂರರಷ್ಟು ಕಾರ್ಯ ಸಾಧನೆ ಆಗುವುದು ಬಲು ಅಪರೂಪ. ಅದು ಘೋಷಣೆಗೆ ಮಾತ್ರ ಸೀಮಿತವಾದ ಹಲವಾರು ಉದಾಹರಣೆಗಳಿವೆ. ಆದರಿಂದ ಸರ್ಕಾರ ವಸತಿ ನಿರ್ಮಾಣದಂಥ ಕೆಲಸಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬೇಕು. ವಿಕೋಪಗಳು ಸಂಭವಿಸಿದ ತಕ್ಷಣವೇ ಸರ್ಕಾರ ಹಣ ಬಿಡುಗಡೆಗೊಳಿಸಿ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ದೊರೆಯುವಂತೆ ಮಾಡಬೇಕು.
ನಿಜವಾಗಿಯೂ 2018 ಕೊಡಗಿನ ಜನತೆಯನ್ನು ತಲ್ಲಣಗೊಳಿಸಿದ ವರ್ಷ. ಬಹುತೇಕ ಜನರನ್ನು ನಿರಾಶ್ರಿತರನ್ನಾಗಿಸಿ ಬರಿಗೈ ಮಾಡಿದ ವರ್ಷ. ಸರ್ಕಾರ ಇವರನ್ನು ಸಂತೈಸಿ ಆಶ್ರಯ ನೀಡುವ ಭರವಸೆ ನೀಡಿತ್ತು. ಸಾಕಷ್ಟು ಫಲಾನುಭವಿಗಳಿಗೆ ಸೂರು ದೊರೆತಿದ್ದರೂ ಇನ್ನೂ ಹಲವರು ನಿರಾಶ್ರಿತರಾಗಿಯೇ ಉಳಿದಿದ್ದಾರೆ. ಜಿಲ್ಲೆಯ ಗೌರವಾನ್ವಿತ ಶಾಸಕರು ಈ ಕಡೆ ವಿಶೇಷ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ಪ್ರಯತ್ನ ಮಾಡುತ್ತಿದೆ. ಮದಾಪುರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದವರು ನಿರ್ಮಿಸಿರುವ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸುವ ಸಂಬAಧ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ಶೀಘ್ರ ಸಂತ್ರಸ್ತರಿಗೆ ಮನೆಗಳನ್ನು ಕೊಡಲಾಗುವುದು.