ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡಗು ಜಿಲ್ಲೆ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು, ಇಂತಹ ಪ್ರದೇಶದಲ್ಲಿ ಕಲಾಶಿಬಿರ ಏರ್ಪಡಿಸಿರುವುದು ವಿಶೇಷವೇ ಸರಿ. ಚಿತ್ರಕಲಾ ಶಿಬಿರಕ್ಕೆ ಕೊಡಗು ಉತ್ತಮ ವಾತಾವರಣ ಇದ್ದು, ಇಲ್ಲಿನ ನದಿ, ತೊರೆ, ಹಳ್ಳ, ಕೊಳ್ಳ, ಜಲಪಾತಗಳು, ದೇವಾಲಯಗಳು, ಹೀಗೆ ಪ್ರತಿಯೊಂದನ್ನು ಚಿತ್ರಕಲೆಗಳ ಮೂಲಕ ಪ್ರಾಕೃತಿಕ ಸಂಪತ್ತು ಅನಾವರಣ ಮಾಡಬಹುದಾಗಿದೆ ಎಂದರು.