ರಾಷ್ಟ್ರೀಯ ಹಾಕಿ ಕ್ರೀಡಾಪಟುಗಳಿಗೆ ಸಿಗುತ್ತಿಲ್ಲ ಪ್ರೋತ್ಸಾಹ

ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆ ಆಟದ ಮೈದಾನದಲ್ಲಿ ಆಯೋಜಿಸಿದ್ದ ನಾಲ್ನಾಡು ಅಂತರ ಗ್ರಾಮ ಹಾಕಿ ಹಾಗೂ ಮಹಿಳೆಯರ ಹಗ್ಗ ಜಗ್ಗಾಟದ ನಾಲ್ನಾಡ್ ಕಪ್ ಹಾಕಿ ಉತ್ಸವನ್ನು ಕೊಡಗು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಶನಿವಾರ ಉದ್ಘಾಟಿಸಿದರು.
ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆ ಆಟದ ಮೈದಾನದಲ್ಲಿ ಆಯೋಜಿಸಿದ್ದ ನಾಲ್ನಾಡು ಅಂತರ ಗ್ರಾಮ ಹಾಕಿ ಹಾಗೂ ಮಹಿಳೆಯರ ಹಗ್ಗ ಜಗ್ಗಾಟದ ನಾಲ್ನಾಡ್ ಕಪ್ ಹಾಕಿ ಉತ್ಸವನ್ನು ಕೊಡಗು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಶನಿವಾರ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಡಗು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಬೇಸರ
  • ನಾಲ್ನಾಡು ಅಂತರ ಗ್ರಾಮ ಹಾಕಿ, ಮಹಿಳಾ ಹಗ್ಗ ಜಗ್ಗಾಟದ ನಾಲ್ನಾಡ್ ಕಪ್ ಹಾಕಿ ಉತ್ಸವ
ನಾಪೋಕ್ಲು: ಕಾಫಿಗೆ ಕೊಡಗು ಜಿಲ್ಲೆ ಪ್ರಸಿದ್ಧಿ ಪಡೆದಿರುವಂತೆ ಹಾಕಿ ಕ್ರೀಡೆಗೂ ಪ್ರಖ್ಯಾತಿ ಹೊಂದಿದೆ. ಹಾಕಿ ರಾಷ್ಟ್ರೀಯ ಕ್ರೀಡೆಯಾದರೂ ಆ ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕೊಡಗು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಹೇಳಿದರು.
ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಿದ್ದ ನಾಲ್ನಾಡು ಅಂತರ ಗ್ರಾಮ ಹಾಕಿ ಹಾಗೂ ಮಹಿಳಾ ಹಗ್ಗ ಜಗ್ಗಾಟದ ನಾಲ್ನಾಡ್ ಕಪ್ ಹಾಕಿ ಉತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೊಡಗು ಹಾಗೂ ಪಂಜಾಬ್ ಹಲವು ಕ್ರೀಡಾಪಟುಗಳನ್ನು ನೀಡಿದೆ. ಹಾಕಿ ಆಟವನ್ನು ಉತ್ತೇಜಿಸುವ ಉದ್ದೇಶದಿಂದ ಕ್ರೀಡಾಪಟುಗಳಿಗೆ ವಿವಿಧ ಸಂಘ-ಸಂಸ್ಥೆಗಳ, ಕ್ಲಬ್‌ಗಳು ಸೂಕ್ತ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ನಾಲ್ನಾಡು ಹಾಕಿ ಕ್ಲಬ್ ಮೂಲಕ ಪ್ರತಿ ವರ್ಷ ನಾಲ್ಕು ನಾಡು ವ್ಯಾಪ್ತಿಯ ಗ್ರಾಮಗಳ ನಡುವೆ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕೊಡಗು ಡಿಸಿಸಿ ಬ್ಯಾಂಕ್ ಸಿಇಒ ಮಣವಟ್ಟಿರ ಜಯ ಕುಶಾಲಪ್ಪ ಮಾತನಾಡಿ, ಕ್ರೀಡೆಯೊಂದಿಗೆ ಜನರ ಶಿಸ್ತು, ಅತಿಥಿ ಸತ್ಕಾರ ಎಲ್ಲವೂ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ವಿಭಿನ್ನ ಸಂಸ್ಕೃತಿ, ನಡವಳಿಕೆ ಹಾಗೂ ಶಿಸ್ತು, ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದೆ. ಇದನ್ನು ಉಳಿಸಿ ಬೆಳೆಸುವಂಥ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಿಂದ ರಾಷ್ಟ್ರಮಟ್ಟಕ್ಕೆ ಹೋಗುವ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗಿದೆ. ಇತರ ರಾಜ್ಯಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಇಂಥ ಪಂದ್ಯಾವಳಿ ಮೂಲಕ ಕ್ರೀಡಾಪಟುಗಳು ಉತ್ತಮ ತರಬೇತಿ ಹೊಂದುವುದರ ಮೂಲಕ ಜಿಲ್ಲೆಯಿಂದ ಕನಿಷ್ಠ 10 ಕ್ರೀಡಾಪಟುಗಳು ಮೇಲ್ಮಟ್ಟಕ್ಕೆ ಹೋಗುವಂತಾಗಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟೂರ್ನಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ನಾಲ್ಕು ನಾಡು ವ್ಯಾಪ್ತಿಯ ಕ್ರೀಡಾಪಟುಗಳನ್ನು ಒಗ್ಗೂಡಿಸಿ ನಾಲ್ಡ್ ಕಪ್ ಹಾಕಿ ಪಂದ್ಯಾವಳಿ ಪ್ರತಿ ವರ್ಷ ಆಯೋಜಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಕಡಿತಗೊಂಡಿದ್ದ ಪಂದ್ಯಾವಳಿಯನ್ನು ಕಳೆದ ವರ್ಷ ಪುನರಾರಂಭಿಸಲಾಗಿದೆ ಎಂದು ತಿಳಿಸಿದರು.
ನಾಲ್ನಾಡು ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಉಪಾಧ್ಯಕ್ಷ ಕೈಬಿಲಿರಾ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಗೇಟಿರ ಕುಮಾರ್ ಸೋಮಣ್ಣ, ಖಜಾಂಚಿ ಚಿಯಂಡಿ ದಿನೇಶ್, ಸಹಕಾರ್ಯದರ್ಶಿ ಮಚ್ಚೂರ ಯದುಕುಮಾರ್, ಹೊಸೊಕ್ಲು ಮಾಚಯ್ಯ, ಅಪ್ಪುಮನಿಯಂಡ ಶೈಲಾ, ಎ.ಕೆ.ಮನು ಮುತ್ತಪ್ಪ, ಕರವಂಡ ಸೀಮಾ ಗಣಪತಿ, ಚಗೇಟಿರ ಕುಮಾರ್ ಸೋಮಣ್ಣ ಇತರರು ಇದ್ದರು.
ಟೂರ್ನಿ ಮಾ.28ರಿಂದ ಏಪ್ರಿಲ್ 2ರವರೆಗೆ ನಾಲ್ಕುನಾಡು ವ್ಯಾಪ್ತಿಯ ವಿವಿಧ ಗ್ರಾಮಗಳ ನಡುವೆ ಟೂರ್ನಿ ನಡೆಯಲಿದೆ. ಪ್ರಥಮ ಪಂದ್ಯಾಟ ಪುಳಿಕೋಟು ಮತ್ತು ಕೊಳಕೇರಿ ತಂಡಗಳ ನಡುವೆ ಪ್ರಾರಂಭವಾಯಿತು. ಟೂರ್ನಿ ಡೈರೆಕ್ಟರ್ ಕರವಂಡ ಅಪ್ಪಣ್ಣ, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಚೈಯಂಡ ಅಪ್ಪಚ್ಚು, ಪಟ್ರಪಂಡ ಮಂದಣ್ಣ, ಕೊಳುವಂಡ ಚಂಗಪ್ಪ, ಕುಪ್ಪಂಡ ದಿಲನ್, ಅನ್ನಡಿಯಂಡ ಪೊನ್ನಪ್ಪ, ತಾಂತ್ರಿಕ ಸಮಿತಿ ವಿನೋದ್ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net