ಯವಕಪಾಡಿ ಗ್ರಾಮದ ಕೋಳಿಂದ ಕುಡಿಯ ಕುಟುಂಬಸ್ಥರು ತಮ್ಮ ಐನ್‌ಮನೆಯಲ್ಲಿ ಸೇರಿ ಕುಡಿಯರ ಕುಲದೈವವಾದ ಮಲೆ ತಮ್ಮಚ್ಚನಿಗೆ ಮತ್ತು ಕರಿ ಚಾಮುಂಡಿ, ಪನ್ನಗಾಲ ತಮ್ಮೆ, ಇಗ್ಗುತ್ತಪ್ಪ, ದೈವ ದೇವರುಗಳಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ನಾಪತ್ತೆಯಾದ ಶರಣ್ಯ ಹಾಗೂ ಹುಡುಕಲು ಅರಣ್ಯದ ಒಳಗೆ ತೆರಳುವವರಿಗೆ ಯಾವುದೇ ಅಡ್ಡಿ, ಆತಂಕಗಳು ಬಾರದಂತೆ ಕುಟುಂಬದ ಪಟ್ಟಿದಾರ ಕೆ.ಎ.ಚಿನ್ನಪ್ಪ ಎಲ್ಲರ ಪರವಾಗಿ ವಿಶೇಷ ಪ್ರಾರ್ಥನೆ ಮಾಡಿದರು.