ನಾಪೋಕ್ಲು ಲಯನ್ಸ್ ಸಂಸ್ಥೆ ಹಿರಿಯ ಸದಸ್ಯರಿಗೆ ಸನ್ಮಾನ

ನಾಪೋಕ್ಲು ಲಯನ್ಸ್ ಸಂಸ್ಥೆ ಹಿರಿಯ ಸದಸ್ಯರಾದ ಬೊಪ್ಪೇರ  ಕಾವೇರಪ್ಪ ಹಾಗೂ  ಸರ್ವೇ ಆಫ್ ಇಂಡಿಯಾ ನಿವೃತ್ತ ಅಧಿಕಾರಿ ಕೇಟೋಳಿರ ಎಸ್.ಕುಟ್ಟಪ್ಪ  ಅವರನ್ನು ಸನ್ಮಾನಿಸಲಾಯಿತು. ಡಾ.ಕೋಟೆರ ಪಂಚಮ್ ತಿಮ್ಮಯ್ಯ, ಅಭಿನಂದನ್ ಬಿ.ಶೆಟ್ಟಿ ಇತರರು ಇದ್ದರು.
ನಾಪೋಕ್ಲು ಲಯನ್ಸ್ ಸಂಸ್ಥೆ ಹಿರಿಯ ಸದಸ್ಯರಾದ ಬೊಪ್ಪೇರ ಕಾವೇರಪ್ಪ ಹಾಗೂ ಸರ್ವೇ ಆಫ್ ಇಂಡಿಯಾ ನಿವೃತ್ತ ಅಧಿಕಾರಿ ಕೇಟೋಳಿರ ಎಸ್.ಕುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು. ಡಾ.ಕೋಟೆರ ಪಂಚಮ್ ತಿಮ್ಮಯ್ಯ, ಅಭಿನಂದನ್ ಬಿ.ಶೆಟ್ಟಿ ಇತರರು ಇದ್ದರು.
Published on
ನಾಪೋಕ್ಲು: ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಲಯನ್ಸ್ ರೀಜನ್ ಮೀಟ್ ಸಮ್ಮೇಳನದಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಿದ್ದ ಲಯನ್ಸ್ ರೀಜನ್ ಮೀಟ್ ಬೆಸುಗೆ ಸಮ್ಮೇಳನದಲ್ಲಿ ಹಿರಿಯ ಸದಸ್ಯರಾದ ಬೊಪ್ಪೇರ ಕಾವೇರಪ್ಪ ಹಾಗೂ ಸರ್ವೇ ಆಫ್ ಇಂಡಿಯಾ ನಿವೃತ್ತ ಅಧಿಕಾರಿ ಕೇಟೋಳಿರ ಎಸ್.ಕುಟ್ಟಪ್ಪ ಅವರ ಸುದೀರ್ಘ ಅವಧಿ ಸೇವೆ ಪರಿಗಣಿಸಿ ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಡಾ.ಕೋಟೆರ ಪಂಚಮ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನ್ ಬಿ.ಶೆಟ್ಟಿ, ಲಯನ್ಸ್ ಪ್ರಾಂತೀಯ ರಾಯಭಾರಿ ನವೀನ್ ಅಂಬೆಕಲ್, ವಲಯ ಅಧ್ಯಕ್ಷರಾದ ಬಿಂದ್ಯಾ ಗಣಪತಿ, ಸಿ.ಟಿ.ಅಪ್ಪಣ್ಣ, ನಟರಾಜ ಕೆಸ್ತೂರು, ಕೇಟೋಳಿರ ರತ್ನ ಚರ್ಮಣ್ಣ, ಮುಕ್ಕಾಟಿರ ವಿನಯ್, ಎಳ್ತ ತಂಡ ಬಿ.ಬೋಪಣ್ಣ, ಮಾದೆಯಂಡ ಬಿ. ಕುಟ್ಟಪ್ಪ, ಅಪ್ಪುಮನಿಯಂಡ ಬನ್ಸಿ ಭೀಮಯ್ಯ, ಅಪ್ಪಚೆಟ್ಟೋಳಂಡ ವಸಂತ್ ಮುತ್ತಪ್ಪ, ಬಿ.ಕೆ ಕನ್ನಿಕಾ, ಎಂ.ಪಿ.ಧ್ರುವ ದೇವಯ್ಯ, ಅನನ್ಯ ಅಯ್ಯಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net