ಸಮಾಜದ ಅಭಿವೃದ್ಧಿಗೆ ಲಯನ್ಸ್ ಸದಸ್ಯರು ಶ್ರಮಿಸಿ

ನಾಪೋಕ್ಲು ಲಯನ್ಸ್  ಕ್ಲಬ್ ಮತ್ತು ಲಿಯೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ಲಯನ್ಸ್  ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕುಡುಪಿ ಅರವಿಂದ ಶೆಣೈ ಪಾಲ್ಗೊಂಡು ಮಾತನಾಡಿದರು.
ನಾಪೋಕ್ಲು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕುಡುಪಿ ಅರವಿಂದ ಶೆಣೈ ಪಾಲ್ಗೊಂಡು ಮಾತನಾಡಿದರು.
Published on
ನಾಪೋಕ್ಲು: ಲಯನ್ಸ್ ಕ್ಲಬ್ಬಿನ ಸದಸ್ಯರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕುಡುಪಿ ಅರವಿಂದ ಶೆಣೈ ಹೇಳಿದರು.
ಸ್ಥಳಿಯ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಸಹಯೋಗದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಮ್ಮ ಗಳಿಕೆಯ ಒಂದು ಅಂಶವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಸಮಾಜ ಸೇವೆ ಲಯನ್ಸ್ ಕ್ಲಬ್ ಸದಸ್ಯರ ಧ್ಯೇಯೋದ್ದೇಶವಾಗಬೇಕು ಎಂದರು
ನಾಪೋಕ್ಲು ಲಯನ್ಸ್ ಕ್ಲಬ್ ಹಾಗೂ ಪಿರಿಯಾಪಟ್ಟಣ ಲಯನ್ಸ್ ಘಟಕಗಳು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ ಎಂದು ಶ್ಲಾಘಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಯನ್ ಕ್ಲಬ್ ಉತ್ತಮ ಕಾರ್ಯಗಳನ್ನು ಕೈಗೊಂಡಿದೆ. ಮುಡಿಪುವಿನಲ್ಲಿ 1.5 ಕೋಟಿ ರೂ. ಅನುದಾನದಲ್ಲಿ ಕ್ಯಾನ್ಸರ್ ತಪಾಸಣಾ ಕೇಂದ್ರವನ್ನು ತಪಸ್ಯ ಫೌಂಡೇಷನ್ ವತಿಯಿಂದ ಸ್ಥಾಪಿಸಲಾಗಿದ್ದು ನಿರ್ವಹಿಸಲಾಗುತ್ತಿದೆ. ವಿವಿಧ ಶಾಲೆಗಳಿಗೆ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ಆಹಾರ ಸಾಗಣೆ ವಾಹನವನ್ನು ಒಂದು ಕೋಟಿ ರೂ ವೆಚ್ಚದಲ್ಲಿ ಒದಗಿಸಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ ಶಾಲಾ ಆಟದ ಮೈದಾನ ನಿರ್ಮಾಣಕ್ಕೆ ಒಂದು ಕೋಟಿ ರೂ.ಅನುದಾನವನ್ನು ಒದಗಿಸಿದೆ ಎಂದರು.
ಈ ಸಂದರ್ಭ ಅವರು ಲಿಯೋ ಕ್ಲಬ್‌ಗೆ ಸೇರ್ಪಡೆಯಾದ ಸ್ಥಳಿಯ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಪಾರಾಣೆ ಪ್ರೌಢಶಾಲೆಗೆ ಮೂರು ಗ್ರೀನ್ ಬೋರ್ಡ್‌ಗಳಿಗೆ ದನ ಸಹಾಯವನ್ನು ವಿತರಿಸಲಾಯಿತು ಮತ್ತು ಕ್ಲಬ್ಬಿನ ಹಿರಿಯ ಸದಸ್ಯರಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತು..
ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೆಯಂಡ ಬಿ.ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ. ಶೈಲಾ ಭೀಮಯ್ಯ ಪ್ರಾರ್ಥನೆ, ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಧ್ವಜವಂದನೆ ನೆರವೇರಿಸಿದರು. ಕೇಟೋಳಿರ ರತ್ನಾ ಚರ್ಮನ ಅತಿಥಿಗಳ ಪರಿಚಯ ಮಾಡಿದರು.
ಲಯನ್ ಪ್ರಾಂತ್ಯ ಅಧ್ಯಕ್ಷ ಕೋಟೆರ ಡಾ.ಪಂಚಂ ತಿಮ್ಮಯ್ಯ, ಲಯನ್ಸ್ ವಲಯ ಅಧ್ಯಕ್ಷರಾದ ಬಿಂದು ಗಣಪತಿ, ಚೆಟ್ಟಿಮಾಡ ಟಿ. ಅಪ್ಪಣ್ಣ , ಪಿರಿಯಾಪಟ್ಟಣ ಲಯನ್ಸ್ ಅಧ್ಯಕ್ಷ ಜೆ.ಗಿರೀಶ್, ಸಹ ಕಾರ್ಯದರ್ಶಿ ಸುಮನ್ ಬಾಲಚಂದ್ರ, ನಾಪೋಕ್ಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಬನ್ಸಿ ಭೀಮಯ್ಯ, ಖಜಾಂಚಿ ಅಪ್ಪಚೆಟ್ಟೋಳಂಡ ವಸಂತ ಮುತ್ತಪ್ಪ , ಎಸ್.ಆನಂದ್, ಲಿಯೋಕ್ಲಬ್ ಅಧ್ಯಕ್ಷೆ ಕನ್ನಿಕಾ ಹಾಗೂ ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net