ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೊಡವ ಕೌಟುಂಬಿಕ ಹಾಕಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.
Published on:
Copied
Follow Us
ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕೂತಂಡ- ಕಾರೇರ ವಿರುದ್ಧ 6-0 ಅಂತರದ ಭರ್ಜರಿ ಜಯಗಳಿಸಿತು.
ಕೂತಂಡ ತಂಡದ ಆಟಗಾರರಾದ ಬೋಪಣ್ಣ-1,ಸಂತೋಷ್ -2, ಸೋಮಣ್ಣ-1, ಪೂಣಚ್ಚ-1 ಹಾಗೂ ಸಜನ್ ದೇವಯ್ಯ-1 ಗೋಲು ಗಳಿಸಿ ತಂಡಕ್ಕೆ ಭರ್ಜರಿ ಜಯ ತಂದಿತ್ತರು.
ಅಂಜಪರವಂಡ ಮುಂಡಿಯೋಳಂಡ ಮುಂದು ವಿರುದ್ಧ 2-0 ಅಂತರದಿಂದ ಚೇಂದೀರ ಕೋಟೆರ ವಿರುದ್ಧ 3-1ಅಂತರದಿಂದ ಕನ್ನಂಡ ಮೇವಡ ವಿರುದ್ಧ 2-1ಅಂತರದಿಂದ ಜಯಗಳಿಸಿತು.
ಪಾಡೆಯಂಡ ಮತ್ತು ಕಾಯಪಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದವು.
ಪಾಡೆಯಂಡ ಕಾಯಪಂಡ ವಿರುದ್ಧ 4-3 ಅಂತರದಿಂದ ಟೈಬ್ರೇಕರ್‌ನಲ್ಲಿ ಜಯಗಳಿಸಿತು.