2019 ರಿಂದ 2025 ರವರೆಗೆ ಪಿಡಿಒ ಆಗಿ ಉತ್ತಮ ಸೇವೆ ಸಲ್ಲಿಸಿ ಇದೀಗ ನಿರ್ಗಮಿಸುತ್ತಿರುವ ಎ.ಎ ಅಬ್ದುಲ್ಲಾ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅಬ್ದುಲ್ಲಾ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಎಚ್.ವಿ.ವತ್ಸಲಾ ಕುಮಾರಿ ಅವರು ಅಧಿಕಾರ ಸ್ವೀಕರಿಸಿದರು. ಎಚ್.ಎ.ಹಂಸ, ಅನುರಾಧಾ, ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.