ಪುದಿಯೊಕ್ಕಡ, ಪರದಂಡ ತಂಡಗಳಿಗೆ ಗೆಲುವು

ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರದ ಪಂದ್ಯ.
ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರದ ಪಂದ್ಯ.
Published on
ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೊಡವ ಕೌಟುಂಬಿಕ ಹಾಕಿ ಚೇನಂಡ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ಪುದಿಯೊಕ್ಕಡ- ಮರುವಂಡ ವಿರುದ್ಧ 5-1ರಿಂದ ಪುದಿಯೊಕ್ಕಡ, ಪರದಂಡ-ನಂಬುಡುಮಾಡ ವಿರುದ್ಧ 4-1ರಿಂದ ಪರದಂಡ ತಂಡಗಳು ಜಯಗಳಿಸಿದವು.
ಮೇರಿಯಂಡ ಮಂಡೇಟಿರ ವಿರುದ್ಧ ಟೈ ಬ್ರೇಕರ್‌ನಲ್ಲಿ 5-4ರಿಂದ, ಸಣ್ಣುವಂಡ ಕುಮ್ಮಂಡ ವಿರುದ್ಧ ಟೈ ಬ್ರೇಕರ್‌ನಲ್ಲಿ 2-1ರಿಂದ, ಮೇಕೆರಿರ ಕಾಂಗಂಡ ವಿರುದ್ಧ ಟೈಬ್ರೇಕರ್‌ನಲ್ಲಿ 4-3ರಿಂದ ಜಯಗಳಿಸಿದವು. ನೆಲ್ಲಮಕ್ಕಡ ತಂಡ ವಾಕ್ ಓವರ್ ಗಳಿಸಿತು.
ಉಳಿದಂತೆ ಮಂಡೇಟಿರ ಕೈಬುಲಿರ ವಿರುದ್ಧ 3-0ಯಿಂದ,ಬೊಳ್ಳೇಪಂಡ ಮಂದೆಯಡ ವಿರುದ್ಧ 3-0ಯಿಂದ, ಮಚ್ಚಾರಂಡ ನಾಳಿಯಂಡ ವಿರುದ್ಧ 1-0ಯಿಂದ,ಮಂಡೇಪಂಡ ಕಡೇಮಡ ವಿರುದ್ಧ 3-0ಯಿಂದ,ಕಾಡ್ಯಮಾಡ ತೀತಿಮಾಡ ವಿರುದ್ಧ 1-0ಯಿಂದ,ಇಟ್ಟೀರ ಐಚಂಡ ವಿರುದ್ಧ 1-03ಯಿಂದ,ಐತಿಚಂಡ ಅಲೇಮಾಡ ವಿರುದ್ಧ 1-0ರಿಂದ, ಪಂದ್ಯಂಡ ಕುಪ್ಪಂಡ (ನಾಂಗಾಲ) ಪಂದ್ಯಂಡ ವಿರುದ್ಧ 2-0ಯಿಂದ, ಚೇಂದಂಡ ಮುಕ್ಕಾಟಿರ (ಕಡಗದಾಳು) ವಿರುದ್ಧ 1-0ಯಿಂದ, ಕಾಳೇರ ಮಾಚಿಮಂಡ ವಿರುದ್ಧ 2-0ಯಿಂದ,ಕೊಂಗಂಡ ಮುಕ್ಕಾಟಿರ (ಬೋಂದ) ವಿರುದ್ಧ 2-0ರಿಂದ, ಪಟ್ಟಚೆರುವಾಳಂಡ ಕುಂದೀರ ವಿರುದ್ಧ 2-0ರಿಂದ, ಮೂಕೊಂಡ ಚಿಮ್ಮಣಮಾಡ ವಿರುದ್ಧ 4-0 ರಿಂದ ಗೆಲುವುಸಾಧಿಸಿದವು.
ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಕಾಯಪಂಡ / ಪಾಡೆಯಂಡ ಒಂದು ಪಂದ್ಯ ನಾಳೆಗೆ ಮುಂದೂಡಲಾಗಿದೆ. ಈ ಸಂದರ್ಭ ಮಳೆಯಿಂದ ರಕ್ಷಿಸಲು ಒಂದನೇ ಮುಖ್ಯ ಆಟದ ಮೈದಾನಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಟಾರ್ಪಾಲ್‌ನಿಂದ ಮುಚ್ಚಿ ರಕ್ಷಣೆ ಮಾಡಿರುವುದು ಇಂದಿನ ವಿಶೇಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net