ಬಿಲ್ಲವ ಸಮಾಜದ ಸ್ವಂತ ಜಾಗದ ಕನಸು ನನಸು

ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಕೊಡವ ಸಮಾಜದಲ್ಲಿ ಆಟಿಡೊಂಜಿ ದಿನಾಚರಣೆ, ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಹಾಗೂ ಬೃಹತ್ ರಕ್ತದಾನ ಶಿಬಿರದ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಬಿ.ಎಂ.ಪ್ರತೀಪ, ಬಿ.ಆರ್.ವಸಂತ್, ಜಗನ್ನಾಥ, ಕೆ.ಎಸ್.ಲೋಹಿತ್ ಮತ್ತಿತರರಿದ್ದರು.
ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಕೊಡವ ಸಮಾಜದಲ್ಲಿ ಆಟಿಡೊಂಜಿ ದಿನಾಚರಣೆ, ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಹಾಗೂ ಬೃಹತ್ ರಕ್ತದಾನ ಶಿಬಿರದ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಬಿ.ಎಂ.ಪ್ರತೀಪ, ಬಿ.ಆರ್.ವಸಂತ್, ಜಗನ್ನಾಥ, ಕೆ.ಎಸ್.ಲೋಹಿತ್ ಮತ್ತಿತರರಿದ್ದರು.
Published on

ನಾಪೋಕ್ಲು:

ಬಿಲ್ಲವ ಸಮಾಜಕ್ಕಾಗಿ ಒಂದು ಸ್ವಂತ ಜಾಗ ಖರೀದಿಸುವುದು ಸಮಾಜದ ಕನಸಾಗಿತ್ತು, ಅದು ಇಂದು ನನಸಾಗಿದೆ ಎಂದು ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಹೇಳಿದರು.

ಬಿಲ್ಲವ ಸಮಾಜದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಆಟಿಡೊಂಜಿ ದಿನಾಚರಣೆ, ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಹಾಗೂ ಬೃಹತ್ ರಕ್ತದಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಬಾಂಧವರು ನಡೆಸುವ ಸಭೆ-ಸಮಾರಂಭಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಒಂದು ಸುಸಜ್ಜಿತ ಕಟ್ಟಡದ ಅಗತ್ಯವಿದೆ. ದಾನಿಗಳ ನೆರವಿನಿಂದ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ಸೆಪ್ಟೆಂಬರ್ 6ರಂದು ಸಂಘದ ವಾರ್ಷಿಕ ಮಹಾಸಭೆ ಸಮಾಜದ ನಿವೇಶನದಲ್ಲಿ ನಡೆಯಲಿದ್ದು, ಅಂದು ಸದಸ್ಯರು, ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೂಕ್ತ ಸಲಹೆ, ಸೂಚನೆ ನೀಡುವಂತೆ ಅವರು ಮನವಿ ಮಾಡಿದರು.
ಬಿಲ್ಲವ ಸಮಾಜದ ಜಿಲ್ಲಾ ಉಪಾಧ್ಯಕ್ಷ ಬಿ.ಬಿ.ವಿಠಲ, ಬಿ.ಆರ್.ದೇವಪ್ಪ ಮಾತನಾಡಿದರು.
ಆಟಿ ವಿವಿಧ ತಿನಿಸುಗಳ ಪ್ರದರ್ಶನದಲ್ಲಿ ಭಾಗವಹಿಸಿ ಸಹಕರಿಸಿದ ಹಾಗೂ ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ವಿತರಿಸಿ ಶುಭ ಹಾರೈಸಲಾಯಿತು.
ನಾಪೋಕ್ಲು ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ.ಆರ್.ವಸಂತ್ ಹಾಗೂ ಜಗನ್ನಾಥ, ಕಾರ್ಯದರ್ಶಿ ಕೆ.ಎಸ್.ಲೋಹಿತ್, ಸಂಘಟನಾ ಕಾರ್ಯದರ್ಶಿ ಬಿ.ಎ.ಪ್ರಕಾಶ್, ಖಜಾಂಚಿ ಬಿ.ಡಿ.ದೀಪಕ್, ಕ್ರೀಡಾ ಕಾರ್ಯದರ್ಶಿ ಬಿ.ಎ.ದಿಲೀಪ್ ಸಮಾಜದ ಪ್ರಮುಖರಾದ ಬಿ.ಎಸ್.ಬಾಬು, ಬಿ.ಎಸ್.ಬಾಳಪ್ಪ, ಬಿ.ಜಿ.ಅಣ್ಣಪ್ಪ, ಬಿ.ಬಿ.ನವೀನ್, ಚಂದ್ರಾವತಿ, ದೇವಕ್ಕಿ, ನಳಿನಿ, ಲಲಿತಾ, ಬಿ.ಜಿ.ಧನಂಜಯ, ಶಾರದಾ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net