ಏಡ್ಸ್ ನಿಯಂತ್ರಣ ಅರಿವು

ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ ಹಾಗೂ ಹದಿಹರೆಯದವರ ಸಮಸ್ಯೆ ಕುರಿತು ಅರಿವು ಮೂಡಿಸಲಾಯಿತು.
ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ ಹಾಗೂ ಹದಿಹರೆಯದವರ ಸಮಸ್ಯೆ ಕುರಿತು ಅರಿವು ಮೂಡಿಸಲಾಯಿತು.
Published on
ನಾಪೋಕ್ಲು: ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ ಹಾಗೂ ಹದಿಹರೆಯದವರ ಸಮಸ್ಯೆಗಳ ಕುರಿತು ಅರಿವು ಮೂಡಿಸಲಾಯಿತು.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಸೂಪರ್‌ವೈಸರ್ ಸುನೀತಾ ಮುತ್ತಣ್ಣ ಅವರು ವಿದ್ಯಾರ್ಥಿಗಳಿಗೆ ಏಡ್ಸ್ ಹರಡುವ ಮತ್ತು ತಡೆಗಟ್ಟುವ ವಿಧಾನ, ಚಿಕಿತ್ಸೆ, ಸುರಕ್ಷತೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಏಡ್ಸ್‌ನಂತಹ ಕಾಯಿಲೆಯನ್ನು ಜಾಗೃತಿ ಮತ್ತು ಜ್ಞಾನದಿಂದ ನಿಯಂತ್ರಿಸಬಹುದು. ಮುಕ್ತ ಸಮಾಜವನ್ನು ವಿದ್ಯಾರ್ಥಿಗಳು ಕಟ್ಟುವುದರತ್ತ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಬೇಕು. ಆರೋಗ್ಯಕರ ಸಂಬಂಧಗಳ ಬಗ್ಗೆ ಅರಿವು ಮೂಡಿಸಿ ಒತ್ತಡ, ಭಯ ಅಥವಾ ಬಲವಂತದಿಂದ ಇರುವ ಸಂಬಂಧ ಆರೋಗ್ಯಕರವಲ್ಲ. ವಿದ್ಯಾರ್ಥಿಗಳು ತಪ್ಪು ಮಾಹಿತಿಯಿಂದ ದೂರವಿದ್ದು ಆರೋಗ್ಯಕರ ಸಂಬಂಧದಲ್ಲಿ ಗೌರವ, ನಂಬಿಕೆ ಹೊಂದಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ, ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವಾಗ ಎಚ್ಚರವಹಿಸಬೇಕು ಎಂದರು.
ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ದಮಯಂತಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net