ಕುಶಾಲನಗರ: .ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಾಗರ ಪಂಚಮಿ ಹಬ್ಬದ ಆಚರಣೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಸೋಮವಾರ ನೆರವೇರಿತು. .ನಾಗರ ಪಂಚಮಿ ಅಂಗವಾಗಿ ದೇವಾಲಯ ಪ್ರಧಾನ ಅರ್ಚಕ ನವೀನ್ ಭಟ್ಟ ಶ್ರೀಸ್ವಾಮಿಗೆ ವಿವಿಧ ಅಭಿಷೇಕ, ಹೂವಿನಿಂದ ಅಲಂಕಾರ ಸೇರಿದಂತೆ ಪೂಜಾ ಕಾರ್ಯ ನೆರವೇರಿಸಿದರು..ಕೂಡಿಗೆ, ಕೂಡುಮಂಗಳೂರು, ಕುಶಾಲನಗರ, ಹೆಬ್ಬಾಲೆ, ಸೇರಿದಂತೆ ಹಲವು ಕಡೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.