ನಾಗ ಬನದಲ್ಲಿ ನಾಗರ ಪಂಚಮಿ

ಹೆಗ್ಗಳ ಪಾಲ್ಟ್ ಮಕ್ಕಿ ನಾಗಬನದಲ್ಲಿ ನಾಗರ ಪಂಚಮಿ ಪ್ರಯಕ್ತ ನಾಗ ತಂಬಿಲ ಪೂಜೆ.
ಹೆಗ್ಗಳ ಪಾಲ್ಟ್ ಮಕ್ಕಿ ನಾಗಬನದಲ್ಲಿ ನಾಗರ ಪಂಚಮಿ ಪ್ರಯಕ್ತ ನಾಗ ತಂಬಿಲ ಪೂಜೆ.
Published on

ವಿರಾಜಪೇಟೆ:

ಹೆಗ್ಗಳ ಗ್ರಾಮದ ಫಾಲ್ಟ್ ಮಕ್ಕಿಯಲ್ಲಿರುವ ನಾಗ ಬನದಲ್ಲಿ ನಾಗರ ಪಂಚಮಿ ಆಚರಿಸಲಾಯಿತು. ಅರ್ಚಕ ವೇಣುಗೋಪಾಲ್ ಭಟ್ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ನಾಗ ದೇವರಿಗೆ ಸಿಯಾಳ ಹಾಗೂ ಹಾಲಿನ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ನೈವೇದ್ಯ ಅರ್ಪಣೆ, ಅಲಂಕಾರ ಪೂಜೆ ನೆರವೇರಿಸಿದರು. ವಿಶೇಷ ಪೂಜೆಯ ಬಳಿಕ ಮಹಾಪೂಜೆ ನೆರವೇರಿಸಿದರು. ಶ್ರೀ ನಾಗ ದೇವರಿಗೆ ಮಂಗಳಾರತಿಯು ಸಲ್ಲಿಕೆಯಾಯಿತು. ದೇವಸ್ಥಾನದ ಒಳ ಆವರಣದಲ್ಲಿರುವ ಹುತ್ತಕ್ಕೆ ಭಕ್ತರು ಹಾಲನ್ನು ಎರೆಯುವುದರ ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net