ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ತೆರೆ ಮಹೋತ್ಸವದ ಪ್ರಯುಕ್ತ ಶನಿವಾರ ಸಂಜೆ ಶ್ರೀ ಮುತ್ತಪ್ಪ ವೆಳ್ಳಾಟಂ, ರಾತ್ರಿ ಶ್ರೀ ಶಾಸ್ತಪ್ಪ ವೆಳ್ಳಾಟಂ, ತದನಂತರ ಶ್ರೀ ವಸುರಿಮಾಲ ವೆಳ್ಳಾಟಂ, ಮುಂಜಾನೆ ಶ್ರೀ ಗುಳಿಗನ ತೆರೆ ಹಾಗೂ ತದನಂತರ ಮುತ್ತಪ್ಪ ಹಾಗೂ ತಿರುವಪ್ಪತೆರೆ ಸೇರಿದಂತೆ ಶ್ರೀ ಶಾಸ್ತಪ್ಪ, ವಸುರಿಮಾಲ ತೆರೆಗಳನ್ನು ನೆರವೇರಿಸಲಾಯಿತು. ತೆರೆ ಮಹೋತ್ಸವದ ಪ್ರಯುಕ್ತ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯನ್ನು ನೆರವೇರಿಸಲಾಯಿತು. ಎರಡು ದಿನ ಜರುಗಿದ ತೆರೆ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು.