ಕಕ್ಕುಂದ ಕಾಡಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮ

ಕಕ್ಕುಂದ ಕಾಡಿನ ವೆಂಕಟೇಶ್ವರ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕೆಸರುಗದ್ದೆ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಸುಶೀಲಾ ಗೌಡ, ಎಂ.ಕೆ.ತಂಗನ್, ಬಿ.ಎಂ.ಪ್ರತೀಪ, ಬಿ.ಎಸ್.ಪ್ರವೀಣ್ ರೈ, ಸೂರ್ಯಕುಮಾರ್ ಇತರರಿದ್ದರು.
ಕಕ್ಕುಂದ ಕಾಡಿನ ವೆಂಕಟೇಶ್ವರ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕೆಸರುಗದ್ದೆ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಸುಶೀಲಾ ಗೌಡ, ಎಂ.ಕೆ.ತಂಗನ್, ಬಿ.ಎಂ.ಪ್ರತೀಪ, ಬಿ.ಎಸ್.ಪ್ರವೀಣ್ ರೈ, ಸೂರ್ಯಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೆಲುವಿಗಾಗಿ ಸೆಣಸಾಡಿದ ಸ್ಪರ್ಧಿಗಳು * ವಿಜೇತರಿಗೆ ಬಹುಮಾನ ವಿತರಣೆ
ನಾಪೋಕ್ಲು: ಕಕ್ಕುಂದ ಕಾಡು ಶ್ರೀ ಗಣಪತಿ ಸೇವಾ ಸಮಿತಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.
ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸುಶೀಲಾ, ಗೌಡ ಯುವ ವೇದಿಕೆಯ ಪ್ರಮುಖ ಕಾವೇರಿ ಮನೆ ಭರತ್, ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ.ತಂಗನ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ್ ಹಾಗೂ ಕಾಫಿ ಬೆಳೆಗಾರ ಚಿಯಾಕ್ಪೂವಂಡ ಕಟ್ಟಿ ಮಂಜುನಾಥ್ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಕ್ರೀಡಾಕೂಟದ ವಿಜೇತರ ವಿವರ: ಕಬಡ್ಡಿ ಪಂದ್ಯಾಟ: ಪ್ರಥಮ-ಸಿದ್ಧಿ ವಿನಾಯಕ, ತಾವೂರು. ದ್ವಿತೀಯ-ಬೆಟಗೇರಿ ಪಿಬಿಕೆ. ಮಹಿಳೆಯರ ಹಗ್ಗ ಜಗ್ಗಾಟ: ಪ್ರಥಮ- ಮಹಿಳಾ ಗೌಡ ಒಕ್ಕೂಟ, ಚೆರಂಭಾಣೆ. ದ್ವಿತೀಯ: ಬಲಮುರಿ ಖುಷಿ ಫ್ರೆಂಡ್ಸ್
ಪುರುಷರ ಹಗ್ಗ ಜಗ್ಗಾಟ: ಪ್ರಥಮ-ಬಲಿಷ್ಠ ಚಡವು ಅರ್ಸ್‌ ಫ್ರೆಂಡ್ಸ್. ದ್ವಿತೀಯ-ವೆಂಕಟೇಶ್ವರ ಗಣಪತಿ ಸೇವಾ ಸಮಿತಿ, ನಾಪೋಕ್ಲು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಮಾತನಾಡಿ, ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಕ್ರೀಡಾಕೂಟಗಳು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಗ್ರಾಮೀಣ ಜನರನ್ನು ಒಗ್ಗೂಡಿಸಲು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖ್ಯ ಎಂದರು.
ಉದ್ಯಮಿ ಬಿ.ಎಸ್.ಪ್ರವೀಣ್ ರೈ, ಶ್ರೀ ಗಣಪತಿ ಸೇವಾ ಸಮಿತಿ ಉಪಾಧ್ಯಕ್ಷ ಸೂರ್ಯಕುಮಾರ್, ನಿರ್ದೇಶಕ ರಾಧಾಕೃಷ್ಣ ರೈ, ಬಾಳೆಯಡ ದಿವ್ಯಾ ಮಂದಪ್ಪ, ಮಹೇಶ್ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಶ್ರೀ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು, ಪಂದ್ಯಾಟದ ಸಂಘಟಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net