ಮಾತೃಭಾಷೆ ಶಿಕ್ಷಣ ಮೂಲಕ ಬದುಕಿನ ದಾರಿ ತೋರಿಸಬೇಕು

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಭಾಗಮಂಡಲ ನಾಡು ಗೌಡ ಸಮಾಜ ಹಾಗೂ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ದಿವಾಕರ ಕುಂದಲ್ಪಾಡಿ ಮಾತನಾಡಿದರು. ನಿಡ್ಯಮಲೆ ರವಿ, ಕುದುಪಜೆ ಪ್ರಕಾಶ್, ಕುದುಪಜೆ ಪಳಂಗಪ್ಪ, ದೇವಂಗೋಡಿ ಹರ್ಷ ಇದ್ದರು.

Published on
ಮಡಿಕೇರಿ:
ಮಕ್ಕಳಿಗೆ ಗೊತ್ತಿರುವ ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸಿ ಬದುಕಿನ ದಾರಿ ಕಲಿಸಬೇಕು ಎಂದು ಭಾಗಮಂಡಲ ಶ್ರೀ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ದಿವಾಕರ ಕುಂದಲ್ಪಾಡಿ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಭಾಗಮಂಡಲ ನಾಡು ಗೌಡ ಸಮಾಜ ಹಾಗೂ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಭಾಗಮಂಡಲ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಫೆಡರೇಶನ್, ಗೌಡ ಸಮಾಜಗಳು ಮತ್ತು ಗೌಡ ಯುವ ಒಕ್ಕೂಟಗಳ ವಿವಿಧ ಕಾರ್ಯಕ್ರಮಗಳ ಫಲವಾಗಿ ಇವತ್ತು ಅರೆಭಾಷೆ ಹೆಚ್ಚು ಬಳಕೆಯಾಗಿ ಜನಪ್ರಿಯವಾಗಿದೆ. ಎಲ್ಲರೂ ಹೆಮ್ಮೆಯಿಂದ ಅರೆ ಭಾಷೆಯನ್ನು ಗಟ್ಟಿಧ್ವನಿಯಲ್ಲಿ ಮಾತನಾಡುತ್ತಾರೆ. ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಅವರ ಮಾತೃಭಾಷೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನಗರಗಳಲ್ಲಿ ಓದುವ ಅನಿವಾರ್ಯತೆ ಇಲ್ಲ, ಮಕ್ಕಳಿಗೆ ಮನೆಗಳಲ್ಲಿ ಮಾತೃಭಾಷೆಯಲ್ಲಿ ಸಾಕಷ್ಟು ವಿಷಯ ಕಲಿಸಬಹುದು, ಎಲ್ಲರೂ ನಮ್ಮ ಆಚಾರ ವಿಚಾರ ಸಂಪ್ರದಾಯಗಳನ್ನು ಬೆಳೆಸಲು ಒಂದಾಗೋಣ ಎಂದು ಹೇಳಿದರು.
ಭಾಗಮಂಡಲ ನಾಡು ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕುದುಪಜ್ಜೆ ಪ್ರಕಾಶ್, ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕ ದೇವಂಗೋಡಿ ಹರ್ಷ, ಸಮಾಜದ ಕಾರ್ಯದರ್ಶಿ ನಿಡ್ಯಮಲೆ ರವಿ, ಫೆಡರೇಶನ್ ನಿರ್ದೇಶಕ ಕುಯ್ಯಮುಡಿ ರಂಜು, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net